ಲಿಂಗಾಯತರಿಗೆ ಇಂದು ಬಂಪರ್ ಬಹುಮಾನ ಕೊಡ್ತಾರಾ ಸಿಎಂ ಯಡಿಯೂರಪ್ಪ

ಬೆಳಗಾವಿ: ವೀರಶೈವ-ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ಸಿಎಂ ಯಡಿಯೂರಪ್ಪ ಇಂದು ಲಿಂಗಾಯತ ಸಮುದಾಯಕ್ಕೆ ಭಾರೀ ಬಂಪರ್ ಕೊಡುಗೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚಿಗಷ್ಟೇ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ ಅದಕ್ಕೆ ರೂ.500 ಕೋಟಿ ನಿಗದಿ ಮಾಡುವ ಮೂಲಕ ತಮ್ಮ ಸಮುದಾಯಕ್ಕೆ ಕೊಡುಗೆ ನೀಡಿದ್ದ ಯಡಿಯೂರಪ್ಪ, ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸಮುದಾಯವನ್ನು ‘೨ಎ’ ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವ ಸಾಧ್ಯತೆ ದಟ್ಟವಾಗಿವೆ.

ಲಿಂಗಾಯತ ಸಮುದಾಯವನ್ನು ‘೨ಎ’ ಪಟ್ಟಿಗೆ ಸೇರಿಸಬೇಕು ಎನ್ನುವುದು ಕಳೆದ ಹಲವು ವರ್ಷಗಳಿಂದ ಕೇಳಿಬರುತ್ತಿರುವ ಬೇಡಿಕೆಯಾಗಿದೆ. ಕೇಂದ್ರದಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಸುಳಿವು ಕಂಡಿರುವ ಯಡಿಯೂರಪ್ಪ, ಅಧಿಕಾರದ ಕೊನೆ ಘಳಿಗೆಯಲ್ಲಿ, ತಮ್ಮ ಸಮುದಾಯದ ವಿಶ್ವಾಸ ಗಳಿಸಲು ಬಂಪರ್ ಕೊಡುಗೆ ನೀಡುವ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page