ಕಿತ್ತೂರು ಅರಣ್ಯದಲ್ಲಿ ವನ್ಯಜೀವಿ ಹಂತಕರ ಸೆರೆ; ಜೀವಂತ ಗುಂಡು ಗನ್ ವಶಕ್ಕೆ


ಬೆಳಗಾವಿ:ಗೋಲಿಹಳ್ಳಿ ವಲಯದ ಕಿತ್ತೂರು ಕಾಯ್ದಿಟ್ಟ ಅರಣ್ಯದಲ್ಲಿ ಅಕ್ರಮವಾಗಿ ನುಗ್ಗಿ ಚಿಗರೆಗೆ ಗುಂಡು ಹಾರಿಸಿದ ಇಬ್ಬರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ.ಅರಣ್ಯ ಅಪರಾಧಗಳನ್ನು ರೂಢಿಗತ( Habitual Offenders) ಮಾಡಿಕೊಂಡಿರುವ ಇವರು ಅರಣ್ಯಾಧಿಕಾರಿಗಳ ಕಣ್ಣು ತಪ್ಪಿಸಿ ವನ್ಯಭೇಟೆಗೆ ಇಳಿಯುತ್ತಾರೆ ಎಂದು ತಿಳಿದುಬಂದಿದೆ.

ಕಿತ್ತೂರು ಬಳಿಯ ಕಾಯ್ದಿಟ್ಟ ಅರಣ್ಯದಲ್ಲಿ ಗುಂಡು ಹಾರಿಸಿದ ಖದೀಮರಿಂದ ಜಿಂಕೆ ತಪ್ಪಿಸಿಕೊಂಡಿದ್ದು, ಬೆಳಗಾವಿ ವಿನಾಯಕ ನಗರದ ಉದ್ದವ ರಾಜೇಂದ್ರ ನಾಯಕ, ಕಾಕತಿ ದೇಸಾಯಿ ಗಲ್ಲಿಯ ಸಾಗರ ಯಲ್ಲೋಜಿ ಪಿಂಗಟೆ ಇಬ್ಬರನ್ನು ಅರಣ್ಯಾಧಿಕಾರಿಗಳು ವನ್ಯಜೀವಿ ಕಾಯ್ದೆ 1972ರ ಅಡಿ ವಶಕ್ಕೆ ಪಡೆದಿದ್ದು, ಇನ್ನಿಬ್ಬರಾದ ಬೆಳಗಾವಿ ನೆಹರೂ ನಗರದ ಮಹಮ್ಮದ ಅಲಿ ಖಾನ್, ಕಿತ್ತೂರಿನ ಅತಾವುಲ್ಲಾ ಶೀಗಿಹಳ್ಳಿ ಎಂಬುವರು ಅರಣ್ಯಾಧಿಕಾರಿಗಳ ಕೈಗೆ ಸಿಗದೇ ಪರಾರಿಯಾಗಿದ್ದಾರೆ.

ಅವರಿಂದ ಒಂದು ಡಿಬಿಬಿಎಲ್ ಬಂದೂಕು, 28 ಜೀವಂತ ಗುಂಡುಗಳು, ಹೆಡ್ ಟಾರ್ಚ್ 2, ಚಾಕು 1, ವಾಕಿಟಾಕಿ 1, ಸ್ಯಾಂಪಲ್ ಏರಗನ್ ಗುಂಡುಗಳು ನಾಲ್ಕು ಬಾಕ್ಸ್ ಹಾಗೂ ಮಾರುತಿ ಸ್ವಿಫ್ಟ್ ದಿಸೈರ್ ಕಾರ್ ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಕಿತ್ತೂರಿನ ಅತಾವುಲ್ಲಾ ಶೀಗಿಹಳ್ಳಿ ಎಂಬಾತ ಸಹ ತಲೆಮರೆಸಿಕೊಂಡಿದ್ದಾನೆ.ಸಿಸಿಎಫ್ ಬಿ. ವಿ. ಪಾಟೀಲ, ಡಿಸಿಎಫ್ ಎಂ. ವಿ. ಅಮರನಾಥ, ಎಸಿಪಿ ಸಿ. ಬಿ. ಮಿರ್ಜಿ ಮಾರ್ಗದರ್ಶನ ನೀಡಿದ್ದರು.ಡಿಆರ್ ಎಫ್ ಓ ಸಿದ್ದಲಿಂಗೇಶ್ವರ ಮಗದುಮ್, ಗಾರ್ಡ್ ಅಜೀಜ್ ಮುಲ್ಲಾ, ಪ್ರವೀಣ ದೂಳಪ್ಪಗೋಳ, ಗಿರೀಶ ಮೆಕ್ಕೇದ , ರಾಜು ಹುಬ್ಬಳ್ಳಿ,  ತಶಿಲಧಾರ ಮತ್ತು ಅರಣ್ಯ ಕಾವಲುಗಾರರು  ಕಾರ್ಯಾಚರಣೆ ನಡೆಸಿದರು.

Leave a Reply

Your email address will not be published. Required fields are marked *

You cannot copy content of this page