
ಎಲ್.ಪಿ.ಜಿ ಸಿಲಿಂಡರ್ ಮನೆಬಾಗಿಲಿಗೆ ಬೇಕೆ? ಕೋಡ್ ಹೇಳಿ
ನವದೆಹಲಿ: ಮನೆಬಳಕೆಯ ಎಲ್.ಪಿ.ಜಿ ಸಿಲಿಂಡರ್ ವಿತರಣೆ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಗುತ್ತಿದ್ದು, ಹೊಸ ವ್ಯವಸ್ಥೆಯು ನವೆಂಬರ್ 1 ರಿಂದ ದೇಶದ 100 ನಗರಗಳಲ್ಲಿ ಜಾರಿಗೆ ಬರಲಿದೆ. ಡೊಮೆಸ್ಟಿಲ್ ಗ್ಯಾಸ್ ಸಿಲಿಂಡರ್ ಗಳ ವಾಣಿಜ್ಯ ಬಳಕೆಯನ್ನು ತಡೆಯಲು ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ವ್ಯವಸ್ಥೆ ಜಾರಿಯಾದ ಬಳಿಕ ಪ್ರತಿ ಸಿಲಿಂಡರ್ ಮಾಲಿಕರ ಮೊಬೈಲಿಗೆ ಒಂದು ಕೋಡ್ ನಂಬರ್ ಬರಲಿದ್ದು. ಮನೆಬಾಗಿಲಿಗೆ ಸಿಲಿಂಡರ್ ಬಂದಾಗ ಆ ನಂಬರ್ ಹೇಳಿದರೆ ಮಾತ್ರ ನಿಮಗೆ ಸಿಲಿಂಡರ್ ಸಿಗಲಿದೆ. ಇಲ್ಲವಾದರೆ ಇಲ್ಲ. ಇದನ್ನು ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ಎನ್ನಲಾಗುತ್ತದೆ. ನೀವು ಗ್ಯಾಸ್ ಏಜೆನ್ಸಿಯಲ್ಲಿ ನಮೂದಿಸಿರುವ ಮೊಬೈಲ್ ನಂಬರಿಗೆ DAC ಬರಲಿದೆ.
ಒಂದು ವೇಳೆ ಗ್ರಾಹಕರು ಗ್ಯಾಸ್ ಏಜೆನ್ಸಿ ಬಳಿ ತಮ್ಮ ಮೊಬೈಲ್ ನಂಬರ್ ನೀಡಿರದೇ ಇದ್ದಲ್ಲಿ, ಆದಷ್ಟು ಬೇಗ ಅವರು ತಮ್ಮ ನಂಬರ್ ರಿಜಿಸ್ಟರ್ ಮಾಡಿಸಬೇಕು. ಇದಕ್ಕಾಗಿ ಒಂದು ಮೊಬೈಲ್ ಆಪ್ ಕೂಡ ಬಿಡುಗಡೆ ಮಾಡಲಾಗುತ್ತಿದ್ದು, ಆ ಮೂಲಕವೂ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಅಪಡೇಟ್ ಮಾಡಬಹುದು.
ಈ ವ್ಯವಸ್ಥೆ ಮನೆಬಳಕೆಯ ಸಿಲಿಂಡರ್ ಗಳಿಗೆ ಮಾತ್ರ ಅನ್ವಯ ಆಗಲಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ಗಳಿಗೆ ಅಲ್ಲ.