ನಾಳೆಯಿಂದ‌ ರೈಲು ಸಂಚಾರ; ಷರತ್ತುಗಳೇನು?

ಬೆಂಗಳೂರು:  ನಾಲ್ಕನೇ ಹಂತದ ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಬಹಳಷ್ಟು ಸಡಿಲಿಕೆಗಳನ್ನು ಮಾಡಲಾಗಿದ್ದು ಬಸ್ ಸಂಚಾರ ಆರಂಭವಾಗಿದೆ. ಇದೀಗ ರಾಜ್ಯದಲ್ಲಿ ನಾಳೆಯಿಂದ ಎರಡು ವಿಶೇಷ ಎಕ್ಸ್ಪ್ರೆಸ್ ರೈಲುಗಳು ಸಂಚಾರ ಆರಂಭಿಸಲಿವೆ.

ಬೆಂಗಳೂರು – ಮೈಸೂರು ಹಾಗೂ ಬೆಂಗಳೂರು – ಬೆಳಗಾವಿ ನಡುವೆ ಈ ರೈಲುಗಳು ಸಂಚರಿಸಲಿದ್ದು, ಇದರಲ್ಲಿ ಪ್ರಯಾಣಿಸಲು ಪ್ರಯಾಣಿಕರು ಕಡ್ಡಾಯವಾಗಿ ಆನ್ಲೈನ್ ನಲ್ಲೇ ಟಿಕೆಟ್ ಬುಕ್ ಮಾಡಬೇಕಿದೆ.

ಪ್ರಯಾಣದ ವೇಳೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ. ನಾಳೆಯಿಂದ ಈ ರೈಲುಗಳು ಪ್ರಾಯೋಗಿಕ ಸಂಚಾರ ಆರಂಭಿಸಲಿದ್ದು, ಬೆಂಗಳೂರಿನಿಂದ ಬೆಳಿಗ್ಗೆ 9-20 ಕ್ಕೆ ಹೊರಟು ಮಧ್ಯಾಹ್ನ 12-45 ಕ್ಕೆ ಮೈಸೂರು ತಲುಪಲಿದೆ.

ಬೆಂಗಳೂರಿನಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ರೈಲು ಸಂಜೆ 6-30 ಕ್ಕೆ ಬೆಳಗಾವಿ ತಲುಪಲಿದೆ.

ಹಾಗೆಯೇ ಬೆಳಗಾವಿಯಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ರೈಲು ಸಂಜೆ 6.30 ಕ್ಕೆ ಬೆಂಗಳೂರು ತಲುಪಲಿದೆ. ಆನ್ಲೈನ್ ಟಿಕೆಟ್ ಖಾತರಿಯಾದ ಬಳಿಕವೇ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಬರುವಂತೆ ಸೂಚಿಸಲಾಗಿದೆ.

Visits: 244

Leave a Reply

Your email address will not be published. Required fields are marked *

You cannot copy content of this page