ಜಾರ್ಖಂಡ್, ರಾಜಸ್ತಾನ ಮತ್ತು ಮುಂಬೈನಿಂದ ಆಗಮಿಸಿದ ಎಂಟು ಮಂದಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಒಂಭತ್ತು ಮಂದಿಯಲ್ಲಿ ಇಂದು ಸೋಂಕು ಪತ್ತೆ

ಬೆಳಗಾವಿ: ಇಂದು ಬೆಳಗಾವಿ ಜಿಲ್ಲೆಯ ಒಟ್ಟು ಒಂಭತ್ತು ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಅವರಲ್ಲಿ ಮೂವರು ಜಾರ್ಖಂಡದಲ್ಲಿನ ಜೈನರ ಪುಣ್ಯಕ್ಷೇತ್ರ ಶಿಖರ್ಜಿ, ಇಬ್ಬರು ರಾಜಸ್ತಾನದ ಮುಸ್ಲಿಂ ಪುಣ್ಯಕ್ಷೇತ್ರ ಅಜ್ಮೇರ್, ಇಬ್ಬರು ಮುಂಬೈ, ಒಬ್ಬರು ಕೊಲ್ಹಾಪುರ ಮತ್ತು ಇನ್ನೋರ್ವ ಹಿರೇಬಾಗೇವಾಡಿಯ ಸೋಂಕಿತರ ಸಂಪರ್ಕಕ್ಕೆ ಬಂದವನಾಗಿದ್ದಾನೆ. ಕೊಲ್ಹಾಪುರದಿಂದ ಆಗಮಿಸಿದ್ದ ರಾಮದುರ್ಗ ತಾಲೂಕಿನ ಏಳು ತಿಂಗಳ ಬಾಲಕನಲ್ಲಿ ಕೊರೊನಾ ಕಂಡು ಬಂದಿದೆ.

ಇಂದು ಸೋಂಕಿತರೆಂದು ಪತ್ತೆಯಾಗಿರುವ ಒಂಭತ್ತರಲ್ಲಿ ಎಂಟು ಮಂದಿಯನ್ನು ಬೈಲಹೊಂಗಲ ತಾಲೂಕಿನ ಸಂಪಗಾಂವದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇಂದು ಪತ್ತೆಯಾಗಿರುವ ಬಹುತೇಕರು ಮೊದಲಿನಿಂದಲೇ ಕ್ವಾರಂಟೈನ್ ನಲ್ಲಿ ಇದ್ದಿದ್ದರಿಂದ, ಇವರಿಂದ ಬೇರೆಯವರಿಗೆ ಸೋಂಕು ಹರಡುವ ಆತಂಕ ಇಲ್ಲ. ಆದರೆ, ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ ಈಗ 119 ಕ್ಕೆ ಏರಿದಂತಾಗಿದೆ.

Visits: 2334

Leave a Reply

Your email address will not be published. Required fields are marked *

You cannot copy content of this page