ಮುನಿಸು ಮರೆತು ಅಂಬೇಡ್ಕರ್ ನಿಗಮ ಒಪ್ಪಿಕೊಂಡ ಶಾಸಕ ಐಹೊಳೆ

ಬೆಳಗಾವಿ: ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರಿಗೆ ಕೊನೆಗೂ ಡಾ. ಬಿ.ಆರ್.ಅಂಬೇಡ್ಕರ್ ನಿಗಮ ನೀಡಿ ಸಮಾಧಾನ ಪಡಿಸಲಾಗಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ನಿನ್ನೆ ಸಂಜೆ ವಿವಿಧ ನಿಗಮ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಅಧಿಕಾರೇತರ ನಿರ್ದೇಶಕರನ್ನು ನೇಮಿಸಿ ಆದೇಶ ಹೊರಡಿಸಿದೆ.

ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ಮತ್ತು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಐಹೊಳೆ ಅವರಿಗೆ ಈ ಮೊದಲು ಖಾದಿ ನಿಗಮದ ಅಧ್ಯಕ್ಷತೆ ನೀಡಲಾಗಿತ್ತು. ಅದನ್ನು ಒಪ್ಪಿಕೊಳ್ಳದ ಐಹೊಳೆ ಅವರು ತಮ್ಮ ಅಸಮಾಧಾನ ಹೊರಹಾಕಿದ್ದರು. ಇದೀಗ ಡಾ.ಅಂಬೇಡ್ಕರ್ ನಿಗಮವನ್ನು ಅವರು ಒಪ್ಪಿಕೊಂಡಿದ್ದು, ಜಿಲ್ಲೆಯ ಮತ್ತೊಬ್ಬ ಶಾಸಕನಿಗೆ ಇನ್ನೊಂದು ಮಹತ್ವದ ಹುದ್ದೆ ನಿಕ್ಕಂತಾಗಿದೆ.

ನಿಗಮಗಳ ನೂತನ ಅಧ್ಯಕ್ಷರು

* ಬಿ.ಎಸ್. ಪರಮಶಿವಯ್ಯ – ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ

* ಎಸ್​.ಆರ್​.ವಿಶ್ವನಾಥ – ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

* ಚಂದು ಪಾಟೀಲ್​ – ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಮಂಡಳಿ

* ಬಿ.ಸಿ.ನಾಗೇಶ್​ – ಕಾರ್ಮಿಕ ಕಲ್ಯಾಣ ಮಂಡಳಿ

* ಬಿ.ಕೆ. ಮಂಜುನಾಥ್​​​ – ನಾರು ಅಭಿವೃದ್ಧಿ ಮಂಡಳಿ

* ಸವಿತಾ ವಿಶ್ವನಾಥ್ ಅಮರ್ ಶೆಟ್ಟಿ – ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ

* ಕಿರಣ್ ಕುಮಾರ್​ – ಜೈವಿಕ ಇಂಧನ ಅಭಿವೃದ್ಧಿ ಮಂಡಳಿ

* ತಾರಾ ಅನುರಾಧ – ಅರಣ್ಯ ಅಭಿವೃದ್ಧಿ ‌ನಿಗಮ

* ಎಸ್.ಆರ್.ಗೌಡ – ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ

* ಕೆ.ವಿ. ನಾಗರಾಜ್​​ – ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ

* ತಿಪ್ಪೇಸ್ವಾಮಿ – ಕಾಡಾ ನಿಗಮ

* ರಘು ಆರ್​ – ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ

* ಬಾಬು ಪತ್ತಾರ್​ – ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ

* ಜೆ.ಕೆ ಗಿರೀಶ್​ ಉಪ್ಪಾರ್​ – ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮ

* ಎಸ್​ ನರೇಶ್​ ಕುಮಾರ್​ – ಸವಿತಾ ಸಮುದಾಯ ಅಭಿವೃದ್ಧಿ ನಿಗಮ

* ತಮ್ಮೇಶ ಗೌಡ ಎಚ್​.ಸಿ – ಕರ್ನಾಟಕ ವಿದ್ಯುತ್​ ಕಾರ್ಖಾನೆ ನಿಯಮಿತ

* ದುರ್ಯೋಧನ ಐಹೊಳೆ – ಡಾ.ಬಿ.ಆರ್​.ಅಬೇಂಡ್ಕರ್​ ನಿಗಮ ನಿಯಮಿತ

* ಎಚ್​. ಹನುಮಂತಪ್ಪ – ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ

* ಎಂ ರಾಮಚಂದ್ರ – ಕೇಂದ್ರ ಪರಿಹಾರ ಸಮಿತಿ

* ಸಿ. ಮುನಿಕೃಷ್ಣ – ಕರ್ನಾಟಕ ಆದಿ ಜಾಂಭವ ಅಭಿವೃದ್ಧಿ ನಿಗಮ

* ಸಿದ್ದನಗೌಡ ಈರ್ಶವರಗೌಡ ಚಿಕ್ಕನಗೌಡ್ರು – ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ

* ಲಿಂಗರೆಡ್ಡಿ ಬಿ.ಎನ್​. ಗುರುಂಡಗೌಡ ಬಾಸರೆಟ್ಟಿ – ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ

* ವಿಜುಗೌಡ ಎಸ್​ ಪಾಟೀಲ್​ – ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ

Leave a Reply

Your email address will not be published. Required fields are marked *

You cannot copy content of this page