ಬೆಳಗಾವಿ ಜಿಲ್ಲೆಯಲ್ಲಿ ಬುಧವಾರ ಪತ್ತೆಯಾಗಿರುವ ಸೋಂಕಿತರ ತಾಲೂಕುವಾರು ವಿವರ

ಬೆಳಗಾವಿ: ಜಿಲ್ಲೆಯಲ್ಲಿ ಇಂದು 279 ಮಂದಿ ಕೊರೊನಾ ಬಾಧಿತರಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಬೆಳಗಾವಿ ತಾಲೂಕಿನಲ್ಲಿ 84, ಹುಕ್ಕೇರಿ 22, ಅಥಣಿ 39, ಸವದತ್ತಿ 12, ಚಿಕ್ಕೋಡಿ 8, ಗೋಕಾಕ 54, ರಾಯಬಾಗ 29, ಖಾನಾಪುರ 12, ಬೈಲಹೊಂಗಲ 4 ಮತ್ತು ರಾಮದುರ್ಗ ತಾಲೂಕಿನಲ್ಲಿ 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಬೆಳಗಾವಿ ನಗರದ ಬೇಪಾರಿ ಗಲ್ಲಿ, ಅಶೋಖ ನಗರ, ನ್ಯೂ ಗರ್ಲ್ಸ್ ಹಾಸ್ಟೆಲ್, ಕುವೆಂಪು ನಗರ, ಸರಸ್ವತಿ ನಗರ, ವೈಭವ ನಗರ, ರೋಹನ ರೆಸಿಡೆನ್ಸಿ, ಬೋಜಗಾರ ಗಲ್ಲಿ, ಶಿವಬಸವ ನಗರ, ನೆಹರೂ ನಗರ, ವಡಗಾವಿ, ಶಿವಾಜಿ ನಗರ, ಆಜಾದ್ ನಗರ, ರಾಮತೀರ್ಥ ನಗರ, ಶ್ರೀ ನಗರ, ತೆಗ್ಗಿನ ಗಲ್ಲಿ, ಶಹಾಪುರ, ವಿಜಯ ನಗರ, ಸರಾಫ ಗಲ್ಲಿ, ಆನಂದವಾಡಿ, ಕಪಿಲೇಶ್ವರ ಕಾಲನಿಯಲ್ಲಿ ಸೋಂಕಿತರು ದೃಢಪಟ್ಟಿದ್ದಾರೆ.

ಸಾಂಬ್ರಾದಲ್ಲಿನ ವಿಮಾನ ತರಬೇತಿ ಕೇಂದ್ರ (ಎಟಿಎಸ್) ನಲ್ಲಿ ಇಂದು 20ಕ್ಕೂ ಹೆಚ್ಚು ಮಂದಿಗೆ ಕೊರೊನಾ ಒಕ್ಕರಿಸಿದೆ. ಇದರ ಜೊತೆಗೆ ಡಿಹೆಚ್ಓ ಕಚೇರಿ, ಜಿಲ್ಲಾಸ್ಪತ್ರೆ, ಐಸಿಎಂಆರ್ ಪ್ರಯೋಗಾಲಯ, ಹಿರೇಬಾಗೇವಾಡಿಯ ಪೊಲೀಸ್ ಠಾಣೆ ಮತ್ತು ಮಚ್ಛೆನಲ್ಲಿನ ಕೆಎಸ್ಆರ್ಪಿ ಘಟಕದಲ್ಲಿ ಇಂದು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಗೋಕಾಕ ತಾಲೂಕಿನ ದುರದುಂಡಿ ಗ್ರಾಮದಲ್ಲಿ 9 ಮತ್ತು ಕೌಜಲಗಿಯ 8 ಮಂದಿಗೆ ಸೋಂಕು ಒಕ್ಕರಿಸಿದೆ. ಖಾನಾಪುರದ ಕಲ್ಮೇಶ್ವರ ನಗರದಲ್ಲಿ 5 ಮಂದಿಯನ್ನು ಸೋಂಕು ಬಾಧಿಸಿದೆ. ಜಿಲ್ಲೆಯಲ್ಲಿ ಇಂದು ಮೃತಪಟ್ಟಿರುವ ಮೂವರಲ್ಲಿ ಇಬ್ಬರು ಬೆಳಗಾವಿಯವರಾಗಿದ್ದರೆ ಇನ್ನೊಬ್ಬರು ಬೈಲಹೊಂಗಲ ತಾಲೂಕಿನವರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page