ಬೆಳಗಾವಿ ಜಿಲ್ಲೆಯಲ್ಲಿ ಇಂದು ಪತ್ತೆಯಾಗಿರುವ ಕೊರೊನಾ ಸೋಂಕಿತರ ತಾಲೂಕುವಾರು ಡಿಟೇಲ್ಸ್ ಇಲ್ಲಿದೆ

ಬೆಳಗಾವಿ: ಜಿಲ್ಲೆಯಲ್ಲಿ ಇಂದು 228 ಮಂದಿಯಲ್ಲಿ ಕೊರೊನಾ ಸೋಂಕು ತಗುಲಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ಮತ್ತು ಮೊನ್ನೆ ಕೂಡ ಜಿಲ್ಲೆಯಲ್ಲಿ ತಲಾ 6 ಮಂದಿ ಮೃತಪಟ್ಟಿದ್ದರು. ಹೀಗಾಗಿ ಮೂರೇ ದಿನದಲ್ಲಿ ಮೃತಪಟ್ಟವರ ಸಂಖ್ಯೆ 18 ಆಗಿದೆ.

ಇಂದು ಬೆಳಗಾವಿ ತಾಲೂಕಿನಲ್ಲಿ ಅತಿಹೆಚ್ಚು 98 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಉಳಿದಂತೆ ಗೋಕಾಕನಲ್ಲಿ 26, ಅಥಣಿ 35, ಚಿಕ್ಕೋಡಿ 14, ಸವದತ್ತಿ 7, ಹುಕ್ಕೇರಿ 8, ರಾಮದುರ್ಗ 7, ರಾಯಬಾಗ 11, ಬೈಲಹೊಂಗಲ 12 ಮತ್ತು ಖಾನಾಪುರ ತಾಲೂಕಿನಲ್ಲಿ 7 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇಂದು ಮೃತಪಟ್ಟವರಲ್ಲಿ ರಾಯಬಾಗ ತಾಲೂಕಿನ ಇಬ್ಬರು ಮತ್ತು ಬೆಳಗಾವಿ, ಅಥಣಿ, ಸವದತ್ತಿ ಮತ್ತು ಬೈಲಹೊಂಗಲ ತಾಲೂಕಿನ ತಲಾ ಒಬ್ಬರು ಸೇರಿದ್ದಾರೆ.

ಬೆಳಗಾವಿ ನಗರದಲ್ಲಿ ಇಂದು ವೀರಭದ್ರ ನಗರ, ಕ್ಯಾಂಪ್, ಶಾಹು ನಗರ, ಅಂಜನೇಯ ನಗರ, ರಾಮ ನಗರ, ಗಾಂಧಿ ನಗರ, ಶಿವಾಜಿ ನಗರ, ಟಿಳಕವಾಡಿ, ಮಹಾಂತೇಶ ನಗರ, ಕಣಬರ್ಗಿ, ಫೋರ್ಟ್ ರಸ್ತೆ, ಸದಾಶಿವ ನಗರ, ವಿನಾಯಕ ನಗರ, ಉಜ್ವಲ ನಗರ, ತಹಸೀಲದಾರ ಗಲ್ಲಿ, ಮಾಳಿ ಗಲ್ಲಿ, ಶೆಟ್ಟಿ ಗಲ್ಲಿ, ಹಿಂದವಾಡಿ, ಆಜಾದ್ ನಗರ, ಖಡೇ ಬಜಾರ್, ಮಹಾಂತೇಶ ನಗರ, ವಡಗಾವಿ, ಅಯೋಧ್ಯಾ ನಗರ, ಶ್ರೀನಗರ, ನ್ಯೂ ಗಾಂಧಿ ನಗರ, ವಿದ್ಯಾ ನಗರ, ಮರಾಠಾ ಗಲ್ಲಿ, ಭೋವಿ ಗಲ್ಲಿ, ಖಾಸಬಾಗ, ಭಾಗ್ಯ ನಗರ, ಗಣೇಶಪುರ, ರಾಮನಗರ, ಶಿವಬಸವ ನಗರ, ವಡಗಾವಿಯ ರಾಮದೇವ ನಗರ, ಕಸಾಯಿ ಗಲ್ಲಿ, ಸುಣಗಾರ ಗಲ್ಲಿ, ಆಜಾದ್ ನಗರ, ಬಡ್ಡೆ ಗಲ್ಲಿ, ಬಾಗವಾನ ಗಲ್ಲಿ, ಮಹಾದ್ವಾರ ರೋಡ್, ಚವಾಟ ಗಲ್ಲಿ, ಅಳವನ ಗಲ್ಲಿ, ಸಮರ್ಥ ನಗರ ಮತ್ತು ಗ್ರುಪ್ ‘ಡಿ’ ಕ್ವಾರ್ಟರ್ಸ್ ಪ್ರದೇಶಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಜಿಲ್ಲಾ ಆಸ್ಪತ್ರೆ ಆವರಣದಲ್ಲಿಯೇ 5 ಮಂದಿಗೆ ಸೋಂಕು ತಗುಲಿದ್ದರೆ, ಐಸಿಎಂಆರ್ ನ ಓರ್ವ ಲ್ಯಾಬ್ ಸಿಬ್ಬಂದಿಗೆ ಕೂಡ ಕೊರೊನಾ ತಗುಲಿದೆ.

ಚಿಕ್ಕೋಡಿ ತಾಲೂಕು ಅಂಕಲಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಬೈಲಹೊಂಗಲದ ಸರ್ಕಾರಿ ಆಸ್ಪತ್ರೆ, ಖಾನಾಪುರದ ಕೆಎಸ್ಆರ್ಟಿಸಿ ಡೆಪೊ, ಬೆಳಗಾವಿ ಮಿಲಿಟರಿ ಆಸ್ಪತ್ರೆಯ ಕೆಲವು ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಬೈಲಹೊಂಗಲ ಸಮೀಪದ ರುದ್ರಾಕ್ಷಿಮಠದಲ್ಲಿಯೂ ಒಬ್ಬರಿಗೆ ಸೋಂಕು ತಗುಲಿದೆ.

Leave a Reply

Your email address will not be published. Required fields are marked *

You cannot copy content of this page