ಗಾಂಧೀಜಿ ಧರಿಸಿದ್ದ ಕನ್ನಡಕ 2.5 ಕೋಟಿ ರೂಪಾಯಿಗಳಿಗೆ ಮಾರಾಟ

ಲಂಡನ್‌: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಧರಿಸಿದ್ದ ಕನ್ನಡಕವೊಂದು 2.5 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ.

1920ರ ಸುಮಾರಿನಲ್ಲಿ ಗಾಂಧೀಜಿ ಧರಿಸುತ್ತಿದ್ದರು ಎನ್ನಲಾಗಿರುವ ಗುಂಡು ಚೌಕಟ್ಟಿನ ಕನ್ನಡಕ ಇಂದಿಗೂ ಭಾರಿ ಮೊತ್ತಕ್ಕೆ ಬಿಕರಿಯಾಗಿದೆ. ಈ ಕನ್ನಡಕ 2.5 ಕೋಟಿ ರೂಗಳಿಗೆ ಮಾರಾಟವಾಗಿದೆ.

ಈಸ್ಟ್ ಬ್ರಿಸ್ಟಲ್‌ ಹೌಸ್‌ನಲ್ಲಿ ನಡೆದ  ಹರಾಜು ಪ್ರಕ್ರಿಯೆಯಲ್ಲಿ ಮಹಾತ್ಮಾ ಗಾಂಧಿ ಅವರ ಕನ್ನಡಕಕ್ಕೆ ಭಾರಿ ಬೆಲೆ ದಕ್ಕಿದೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ.

ಗಾಂಧೀಜಿ ಧರಿಸುತ್ತಿದ್ದರು ಎನ್ನಲಾದ ಈ ಕನ್ನಡಕ ಅಲ್ಲಿನ ಸಿಬ್ಬಂದಿಗೆ ಸಿಕ್ಕಿತ್ತು. ಅದಕ್ಕೆ 14 ಲಕ್ಷ ರೂಪಾಯಿ ಮುಖಬೆಲೆ ಇಟ್ಟು ಹರಾಜಿಗೆ ಹಾಕಲಾಗಿತ್ತು. ಆದರೆ ಹರಾಜು ಪ್ರಕ್ರಿಯೆ ವೇಳೆ ಈ ಕನ್ನಡಕ ಮೂಲ ಬೆಲೆಗಿಂತ ಹದಿನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಬಿಕರಿಯಾಗಿದೆ ಎಂದು ಖಾಸಗಿ ವಾಹಿನಿ ತಿಳಿಸಿದೆ.

ಅಮೆರಿಕದ ವ್ಯಕ್ತಿಯೊಬ್ಬರು ಆನ್‌ಲೈನ್‌ ಮೂಲಕ ಬಿಡ್ ಸಲ್ಲಿಸಿ ಈ ಕನ್ನಡಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೇವಲ ಆರೇ ನಿಮಿಷದಲ್ಲಿ ಮುಕ್ತಾಯವಾಗಿದೆ.

Leave a Reply

Your email address will not be published. Required fields are marked *

You cannot copy content of this page