ಸಿರಿಗನ್ನಡ ಪ್ರತಿಷ್ಠಾನದ ಶಶಿಧರ ಘಿವಾರಿ ಇನ್ನಿಲ್ಲ

ಬೆಳಗಾವಿ:  ಜಿಲ್ಲೆಯ ಕನ್ನಡ ಹೋರಾಟಗಾರ ಮತ್ತು ಸಿರಿಗನ್ನಡ ಪ್ರತಿಷ್ಠಾನದ ರೂವಾರಿ ಶಶಿಧರ ಘಿವಾರಿ (೬೦) ದೈವಾಧೀನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು.

ಸಿರಿಗನ್ನಡ ಪ್ರತಿಷ್ಠಾನದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರತಿವರ್ಷ  ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಸುತ್ತಿದ್ದ ಘಿವಾರಿ ಅವರು ಅಪಾರ ಬಳಗವನ್ನು ಹೊಂದಿದ್ದರು. ಪತ್ರಕರ್ತರಾಗಿ ಹಲವಾರು ಪತ್ರಿಕೆಗಳಲ್ಲಿ ಘಿವಾರಿ ಅವರು ಕಾರ್ಯನಿರ್ವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page