ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ‌ಸ್ಥಾನಕ್ಕೆ ರಮೇಶ ಕತ್ತಿ, ಉಪಾಧ್ಯಕ್ಷ ಸ್ಥಾನಕ್ಕೆ ಸುಭಾಷ ಢವಳೇಶ್ವರ ಅವಿರೋಧ ಆಯ್ಕೆ

ಬೆಳಗಾವಿ: ನಿರೀಕ್ಷೆಯಂತೆ ಡಿಸಿಸಿ‌ ಬ್ಯಾಂಕಿನ‌ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ರಮೇಶ ಕತ್ತಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. 

ಉಪಾಧ್ಯಕ್ಷರಾಗಿ ಸುಭಾಷ ಢವಳೇಶ್ವರ ಆಯ್ಕೆಯಾಗಿದ್ದಾರೆ. ಇಂದು ಮಧ್ನಾಹ್ನ ಆಯ್ಕೆ ಪ್ರಕ್ರಿಯೆ ಕೊನೆಗೊಳ್ಳಲಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬೆಳಗಾವಿಯ ಸರ್ಕೀಟ್ ಹೌಸ್ ನಲ್ಲಿ ವಿಷಯ ಬಹಿರಂಗಪಡಿಸಿದರು.

ಈ ವರ್ಷ ಬ್ಯಾಂಕಿನ  ಶತಮಾನೋತ್ಸವ ಇರುವ ಕಾರಣದಿಂದ ‌ಒಮ್ಮತದಿಂದ ಚುನಾವಣೆ ನಡೆಸಲು ಪಕ್ಷದ ವರಿಷ್ಠರು ಸೂಚಿಸಿದ್ದರು. ಆ ರೀತಿ‌ ನಡೆದುಕೊಳ್ಳಲಾಗಿದೆ ಎಂದು ಸವದಿ ಹೇಳಿದರು.

ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಉಮೇಶ ಕತ್ತಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಎಂಎಲ್ಸ ಮಹಾಂತೇಶ ಕವಟಗಿಮಠ ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

You cannot copy content of this page