ನೂತನ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ನಿಧನ : ಬಿಜೆಪಿಗೆ ಶಾಕ್

ಬೆಳಗಾವಿ: ನವದೆಹಲಿಯಲ್ಲಿ ಇಂದಿನಿಂದ ಲೋಕಸಭೆ ಅಧಿವೇಶನ ಆರಂಭಗೊಂಡಿದ್ದು, ಅಧಿವೇಶನದ ಮೊದಲ ದಿನವೇ ಬಿಜೆಪಿಗೆ ವಿಷಾದಕರ ಸುದ್ದಿ ಅಪ್ಪಳಿಸಿದೆ. ಮೂರು ತಿಂಗಳ ಹಿಂದಷ್ಟೇ ಕರ್ನಾಟಕದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದ ರಾಯಚೂರಿನ ಅಶೋಕ ಗಸ್ತಿ (55) ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

ಎರಡು ವಾರಗಳ ಹಿಂದೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಕೊರೊನಾ ದೃಢಪಟ್ಟ ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಅವರು ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಇದೇ ಅವರ ಮೊದಲ ಅಧಿವೇಶನವಾಗಿತ್ತು. ಅದರಲ್ಲಿ ಭಾಗವಹಿಸುವ ಭಾಗ್ಯ ಅವರಿಗೆ ದೊರೆಯದೆ ಇರುವುದು ವಿಷಾದಕರ.

ಘಟಾನುಘಟಿಗಳೆಲ್ಲ  ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಲಾಬಿ ನಡೆಸುತ್ತಿರುವಾಗ, ಬಿಜೆಪಿಯು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಅಶೋಕ ಗಸ್ತಿ ಅವರ ಹೆಸರನ್ನು ನಾಮನಿರ್ದೇಶನ ಮಾಡಿತ್ತು. ಸವಿತಾ ಸಮಾಜದ ಅಶೋಕ ಗಸ್ತಿ ಅವರನ್ನು ರಾಜ್ಯಸಭೆಗೆ ನೇಮಕ ಮಾಡಿದ ಬಿಜೆಪಿ ಹೈಕಮಾಂಡ್ ನಿರ್ಧಾರ ಬಿಜೆಪಿ ಅಷ್ಟೇ ಅಲ್ಲ ಉಳಿದ ಪಕ್ಷಗಳ ನಾಯಕರಲ್ಲಿಯೂ ಕುತೂಹಲಕ್ಕೆ ಕಾರಣವಾಗಿತ್ತು.

Leave a Reply

Your email address will not be published. Required fields are marked *

You cannot copy content of this page