ಬೆಳಗಾವಿಯಲ್ಲಿ ಮರಗಳ ತೆರವಿಗೆ ಸಿದ್ಧತೆ; ಸಾರ್ವಜನಿಕರಿಂದ ಆಕ್ಷೇಪಣೆ/ ಅಹವಾಲು ಆಹ್ವಾನ 

ಬೆಳಗಾವಿಯಲ್ಲಿ ಮರಗಳ ತೆರವಿಗೆ ಸಿದ್ಧತೆ; ಸಾರ್ವಜನಿಕರಿಂದ ಆಕ್ಷೇಪಣೆ/ ಅಹವಾಲು ಆಹ್ವಾನ 


ಬೆಳಗಾವಿ: ಇಲ್ಲಿಯ ಕೆಎಲ್ಇ ಆಸ್ಪತ್ರೆ ಎದುರಿನ ಪುಣೆ- ಬೆಂಗಳೂರು ರಸ್ತೆಯ ಎರಡೂ ಬದಿ ಇರುವ ಮರಗಳು ಮತ್ತು ಮಚ್ಛೆಯಲ್ಲಿನ ರಾಜ್ಯ ಮೀಸಲು ಪೊಲೀಸ್ 2ನೇ ಪಡೆ ಆವರಣದಲ್ಲಿನ ಮರಗಳನ್ನು ತೆರವುಗೊಳಿಸಿಲು ಮೆಡಿಕಲ್ ಡೈರೆಕ್ಟರ್ ಆಂಡ್ ಚೀಫ್ ಎಕ್ಸಿಕ್ಯೂಟೀವ್ ಇವರು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. 


ಸದರಿ ಸರ್ವೆ ನಂಬರ್ಗಳಲ್ಲಿಯ ಮರಗಳು 50 ಕ್ಕಿಂತ ಹೆಚ್ಚಿಗೆ ಇರುವುದರಿಂದ ಕರ್ನಾಟಕ ಮರಗಳ ಕಾಯ್ದೆ 1976 ನಿಯಮ 8 (3) (7) ರ ಪ್ರಕಾರ "ಪಬ್ಲಿಕ್ ಡಾಮೆನ್"ನಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ/ಅಹವಾಲು ಪಡೆಯಬೇಕಾಗುತ್ತದೆ. ಹಾಗಾಗಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಅಕ್ಟೋಬರ್ 4 ರ ಒಳಗಾಗಿ ಆಕ್ಷೇಪಣೆ/ ಅಹವಾಲು ಸಲ್ಲಿಸಬಹುದು ಎಂದು ಬೆಳಗಾವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.