ಬೆಳಗಾವಿ: ಜಿಲ್ಲಾ ಮುಖ್ಯ ನ್ಯಾಯಾಧೀಶ ಆರ್.ಜೆ.ಸತೀಶ ಸಿಂಗ್ ಅವರ ವರ್ಗಾವಣೆಯಾಗಿದೆ. ಕಳೆದ ಮೂರು ವರ್ಷ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ಕಲಬುರ್ಗಿ ಜಿಲ್ಲಾ ಮುಖ್ಯ ನ್ಯಾಯಾಧೀಶ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಆರ್.ಜೆ.ಸತೀಶ ಸಿಂಗ್ ಅವರ ವರ್ಗಾವಣೆಯಿಂದ ಖಾಲಿಯಾದ ಸ್ಥಾನವನ್ನು ಚಂದ್ರಶೇಖರ ಜೋಶಿ ಅವರು ತುಂಬಲಿದ್ದಾರೆ.
ಅದೇ ರೀತಿ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ರಾಜೇಂದ್ರ ಅವರನ್ನು ಕೂಡ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅವರು ಮಂಗಳೂರಿನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಕೆ.ವಿ.ರಾಜೇಂದ್ರ ಅವರ ವರ್ಗಾವಣೆಯಿಂದ ಖಾಲಿಯಾಗಿರುವ ಸ್ಥಾನವನ್ನು ಕೋಲಾರ ಜಿ.ಪಂ.ಸಿಇಓ ದರ್ಶನ ಹೆಚ್.ವಿ. ತುಂಬಲಿದ್ದಾರೆ. ಕೆ.ವಿ.ರಾಜೇಂದ್ರ ಅವರು ಕೊರೊನಾ ಸಂಕಟದ ಸಮಯದಲ್ಲಿ ಅತ್ಯಂತ ಚೆನ್ನಾಗಿ ಕಾರ್ಯನಿರ್ವಹಿಸಿದ್ದರು.