ಜಾತಿ ಅಲ್ಲ, ಪಾಪುಲ್ಯಾರಿಟಿ ಆಧಾರದ ಮೇಲೆ ಬೆಳಗಾವಿ ಲೋಕಸಭೆಯ ಅಭ್ಯರ್ಥಿ ನಿರ್ಧಾರ; ಸತೀಶ ಜಾರಕಿಹೊಳಿ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟನ್ನು ಜಾತಿ ಆಧಾರದ ಮೇಲೆ ಅಲ್ಲದೆ, ಪಾಪುಲ್ಯಾರಿಟಿ ಹೊಂದಿರುವ ಅಭ್ಯರ್ಥಿಗೆ  ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಭವನ ಕ್ಯಾಂಟೀನ್ ಉದ್ಘಾಟಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. “ಮೂರು ಉದ್ದೇಶದಿಂದ ಕಾಂಗ್ರೆಸ್ ಕಚೇರಿಯಲ್ಲಿ ಕ್ಯಾಂಟಿನ್ ತೆರೆ ಯಲಾಗಿದೆ. ಸಾಮಾನ್ಯ ಜನರು,   ಕಾರ್ಯಕರ್ತರಿಗೆ ಕಡಿಮೆ ಬೆಲೆಯಲ್ಲಿ ಆಹಾರ ನೀಡುವ ಹಾಗೂ ಕಾಂಗ್ರೆಸ್ ಮಹಾನ್ ನಾಯಕರ ಇತಿಹಾಸ ತಿಳಿಸಿಕೊಡುವ ಉದ್ದೇಶದಿಂದ ಕ್ಯಾಂಟಿನ್ ತೆರೆಯಲಾಗಿದೆ ಎಂದರು. ಕ್ಯಾಂಟೀನ್ ದಲ್ಲಿ ೩೦ ರೂಪಾಯಿಗೆ ಪೂರಿ ಭಾಜಿ ಮತ್ತು ೬೦ ರೂಪಾಯಿಗೆ ಚಿಕನ್ ಬಿರಿಯಾನಿ ನೀಡಲಾಗುತ್ತಿದೆ.

‘ನನಗೆ ವಯಸ್ಸಾಗಿದೆ, ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗಲಾಗುತ್ತಿಲ್ಲ’ ಎಂದ ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗಲ್ಲ ಎನ್ನುತ್ತಾರೆ. ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುತ್ತಾರೆ. ಅದೇ ಅವರ ವೈಫಲ್ಯ.  ಜನ ಸಿಟ್ಟಿಗೆದ್ದಿದ್ದು, ಬಿಜೆಪಿಯವರಿಗೆ  ತಕ್ಕ ಪಾಠ ಕಲಿಸಲಿದ್ದಾರೆ. ವಿರೋಧ ಪಕ್ಷ  ಸರ್ಕಾರದ ತಪ್ಪುಗಳ ವಿರುದ್ದ ನಿರಂತರ ಹೋರಾಟ ಮಾಡುತ್ತಿದೆ. ಅಧಿವೇಶದಲ್ಲಿಯೂ ಧ್ವನಿ ಎತ್ತಿದ್ದೇವೆ. ಸರ್ಕಾರದ ಪ್ರತಿ ವೈಫಲ್ಯವನ್ನು ಜನರಿಗೆ ಮನದಟ್ಟು ಮಾಡಿಸುತ್ತಿದ್ದೇವೆ” ಎಂದರು.

ನಟ ದರ್ಶನ- ಯಶ ಬಿಜೆಪಿ ಪರ ಪ್ರಚಾರ ವಿಚಾರವಾಗಿ  ಪ್ರತಿಕ್ರಿಯಿಸಿ,  “ಪ್ರಚಾರ ಮಾಡಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಬಿಜೆಪಿ ಅಭ್ಯರ್ಥಿಯ ಸ್ನೇಹಿತರಿರುವ ಹಿನ್ನೆಲೆ  ಇಬ್ಬರು ನಟರು ಪ್ರಚಾರಕ್ಕೆ ಬರುತ್ತಿರಬಹುದು. ಆದ್ರೂ ಸೆಲೆಬ್ರಟಿಗಳ ನೋಡಿ ಜನ ಮತ ಹಾಕಲ್ಲ.ಹಿಂದೆ ನಟಿ ಪೂಜಾ ಗಾಂಧಿ ರಾಯಚೂರಲ್ಲಿ ಚುನಾವಣೆಗೆ ನಿಂತಿದ್ರು ಮತದಾರರು ಅವರನ್ನ ಗೆಲ್ಲಿಸಿದ್ರಾ? ಎಂದು ಪ್ರಶ್ನಿಸಿದ  ಅವರು, ಸೆಲೆಬ್ರಟಿಗಳು ಬಂದ್ರೆ ಜನ ವೋಟ್ ಹಾಕುತ್ತಾರೆ ಎನ್ನುವುದು ಕಲ್ಪನೆ” ಎಂದು ಸತೀಶ ಜಾರಕಿಹೊಳಿ ಹೇಳಿದರು. 

ಮಕ್ಕಳು ಸೇವಾದಳ ತರಬೇತಿಯಲ್ಲಿ ಭಾಗಿಯಾಗಲಿದ್ದಾರೆ:

ಮಗ ರಾಹುಲ್,ಮಗಳು ಪ್ರಿಯಾಂಕಾ ರಾಜಕೀಯಕ್ಕೆ ಬರಲು ಪೂರ್ವ ತಯಾರಿಯಾಗಬೇಕಿದೆ. ರಾಜಕೀಯಕ್ಕೆ ಬರಲು ಅವರಿಗೆ ಮುಕ್ತ   ಸ್ವಾತಂತ್ರ್ಯವಿದೆ. ಇತ್ತೀಚಿಗೆ ಘಟಪ್ರಭಾದಲ್ಲಿ ಆರಂಭವಾದ  ಸೇವಾಕೇಂದ್ರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ. ಸಮಾಜಸೇವೆ ಎಂದ್ರೆ ಏನು ತಿಳಿದುಕೊಳ್ಳಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು.

Leave a Reply

Your email address will not be published. Required fields are marked *

You cannot copy content of this page