ಇಂದು ಮತ್ತೆ ಜಿಲ್ಲೆಯಲ್ಲಿ 219 ಪ್ರಕರಣಗಳು; 4 ಸಾವು; ಬೆಳಗಾವಿ ಸದಾಶಿವ ನಗರದಲ್ಲಿ 4 ಸೋಂಕಿತರು

ಬೆಳಗಾವಿ: ಜಿಲ್ಲೆಯಲ್ಲಿ ಇಂದು ಮತ್ತೆ 219 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 4 ಮಂದಿ ಮೃತಪಟ್ಟಿದ್ದಾರೆ. ಇಂದು ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 51 ಆಗಿದೆ. ಜಿಲ್ಲೆಯಲ್ಲಿ ಇನ್ನೂ 2,406 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಬೆಳಗಾವಿ ತಾಲೂಕಿನಲ್ಲಿ 130, ಹುಕ್ಕೇರಿ 7, ಗೋಕಾಕ 14, ಸವದತ್ತಿ 12, ಚಿಕ್ಕೋಡಿ 16, ರಾಯಬಾಗ 24, ರಾಮದುರ್ಗ 8 ಮತ್ತು ಖಾನಾಪುರದಲ್ಲಿ ಮೂರು ಕೊರೊನಾ ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಇಂದು ಮೃತಪಟ್ಟವರಲ್ಲಿ ತಲಾ ಒಬ್ಬರು ರಾಯಬಾಗ, ಬೆಳಗಾವಿ, ರಾಮದುರ್ಗ ಮತ್ತು ಚಿಕ್ಕೋಡಿ ತಾಲೂಕಿನವರಾಗಿದ್ದಾರೆ.

ಬೆಳಗಾವಿಯ ವಡಗಾವಿ, ಸಮಾದೇವಿ ಗಲ್ಲಿ, ರಿಸಾಲ್ದಾರ್ ಗಲ್ಲಿ, ಸ್ಕಾಯ್ ಪಾರ್ಕ್ ಅಪಾರ್ಟಮೆಂಟ್ ಟಿಳಕವಾಡಿ, ಕಣಬರಗಿ, ಕೆ.ಹೆಚ್.ಬಿ ಕಾಲನಿ ಹಿಂಡಲಗಾ, ಹಳೆಯ ಪೋಸ್ಟ್ ಆಫೀಸ್, ಅಝಮ ನಗರ, ವಡಾ ಕಂಪೌಂಡ್ ಅನಗೋಳ, ಕಲಾಶ್ರೀ ಬಿಲ್ಡಿಂಗ್ ಶಾಹುನಗರ, ಬಿಮ್ಸ್ ಆಸ್ಪತ್ರೆ, ವಂಟಮುರಿ, ಸದಾಶಿವ ನಗರ, ಸತ್ಕಾರ ಹೊಟೇಲ್, ಮಹಾಂತೇಶ ನಗರ, ಕ್ಯಾಂಪ್, ಹಿರೇಬಾಗೇವಾಡಿ ಪೊಲೀಸ್ ಠಾಣೆ, ಹಳೆಯ ಗಾಂಧಿ ನಗರ, ಬಿಮ್ಸ್ ಆಸ್ಪತ್ರೆ, ಕೆಎಲ್ಇ ಆಸ್ಪತ್ರೆ, ಸೋಮನಾಥ ನಗರ, ನಾರ್ವೇಕರ ಗಲ್ಲಿ, ಕೋಳಿ ಗಲ್ಲಿ, ಸಾಂಬ್ರಾ ಎಟಿಎಸ್. ಸಂಭಾಜಿ ನಗರ, ಶ್ರೀ ನಗರ, ವಂಟಮುರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಅಮನ ನಗರ, ಜಕ್ಕೇರಿ ಹೊಂಡ, ಮಹಾವೀರ ನಗರ ಮಜಗಾವಿ, ಕಾವೇರಿ ನಗರ, ಟಿವಿ ಸೆಂಟರ್, ಹನುಮಾನ ನಗರ, ಕ್ಯಾಂಪ್, ಶಾಸ್ತ್ರಿ ನಗರ, ಕಮಲ ಗಲ್ಲಿ, ನಿಕಂತ ನಿವಾಸ ಸಾವಗಾಂವ ರಸ್ತೆ, ಸಂಗಮೇಶ್ವರ ನಗರ, ಬಸವನ ಕುಡಚಿ, ಗಣೇಶಪುರ, ಅಂಬೇವಾಡಿ, ಚಿರಾಗ ನಗರ, ಮಂಗಳವಾರ ಪೇಟೆ ಟಿಳಕವಾಡಿಯಲ್ಲಿ ಪ್ರಕರಣಗಳು ಕಂಡು ಬಂದಿವೆ. ಸದಾಶಿವ ನಗರದಲ್ಲಿ ಇಂದು 4 ಮಂದಿಗೆ ಕೊರೊನಾ ತಗುಲಿದೆ.

ರಾಜ್ಯದಲ್ಲಿಯೂ ಇಂದು 5,172 ಮಂದಿಗೆ ಕೊರೊನಾ ಬಂದಿರುವುದು ಗೊತ್ತಾಗಿದ್ದು, 98 ಮಂದಿ ಸತ್ತಿದ್ದಾರೆ. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಮೃತಪಟ್ಟಿರುವವರ ಸಂಖ್ಯೆ 2,412 ಆಗಿದೆ. ರಾಜ್ಯದಲ್ಲಿ ಜಿಲ್ಲಾವಾರು ಇಂದು ಪತ್ತೆಯಾಗಿರುವ ಸೋಂಕಿತರ ಸಂಖ್ಯೆ ಹೀಗಿದೆ-

ಬೆಂಗಳೂರು 1852, ಮೈಸೂರು 365, ಬಳ್ಳಾರಿ 269, ಕಲಬುರಗಿ ಮತ್ತು ಬೆಳಗಾವಿ ತಲಾ 219, ಧಾರವಾಡ 184, ದಕ್ಷಿಣ ಕನ್ನಡ 139, ಉಡುಪಿ 136, ಬಾಗಲಕೋಟೆ 134, ವಿಜಯಪುರ 129, ಶಿವಮೊಗ್ಗ 119, ರಾಯಚೂರು 109, ದಾವಣಗೆರೆ 108, ಕೊಪ್ಪಳ 107, ತುಮಕೂರು ಮತ್ತು ಗದಗ ತಲಾ 99, ಮಂಡ್ಯ 95, ಬೆಂಗಳೂರು ಗ್ರಾಮಾಂತರ 93, ಚಿಕ್ಕಬಳ್ಳಾಪುರ 72, ಚಿತ್ರದುರ್ಗ 60, ಚಿಕ್ಕಮಗಳೂರು 57, ಬೀದರ್ ಮತ್ತು ಹಾವೇರಿ ತಲಾ 52, ಉತ್ತರ ಕನ್ನಡ ಮತ್ತು ರಾಮನಗರ ತಲಾ 51, ಚಾಮರಾಜನಗರ 43, ಯಾದಗಿರಿ ಮತ್ತು ಕೋಲಾರ ತಲಾ 39, ಕೊಡಗು 35.

Leave a Reply

Your email address will not be published. Required fields are marked *

You cannot copy content of this page