ಬೆಳಗಾವಿಯಿಂದ ಪ್ರವಾಸೋದ್ಯಮ ಕಚೇರಿ ಸ್ಥಳಾಂತರದ ಆದೇಶ ರದ್ದುಪಡಿಸುವಲ್ಲಿ ಯಶಸ್ವಿಯಾದ ಶಾಸಕ ಅಭಯ ಪಾಟೀಲ

ಬೆಳಗಾವಿ: ಇಲ್ಲಿಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸ್ಥಳಾಂತರಿಸಿರುವ ಆದೇಶವನ್ನು ರದ್ದು ಪಡಿಸುವಲ್ಲಿ ಬೆಳಗಾವಿ (ದಕ್ಷಿಣ) ಕ್ಷೇತ್ರದ ಶಾಸಕ ಅಭಯ ಪಾಟೀಲ ಯಶಸ್ವಿಯಾಗಿದ್ದಾರೆ.

ಒಂದಾದ ನಂತರ ಇನ್ನೊಂದು ಸರ್ಕಾರಿ ಕಚೇರಿಗಳು ಬೆಳಗಾವಿಯಿಂದ ಬೇರೆಡೆ ಸ್ಥಳಾಂತರಗೊಳ್ಳುತ್ತಿರುವುದಕ್ಕೆ ಜನರು ಅಸಮಾಧಾನಗೊಂಡಿದ್ದರು. ಈ ನಡುವೆ ಪ್ರವಾಸೋದ್ಯಮಇಲಾಖೆ ಕಚೇರಿಯ ವರ್ಗಾವಣೆ ಆದೇಶದಿಂದ ಬೆಳಗಾವಿಗರು ಆಕ್ರೋಶಗೊಂಡಿದ್ದರು.

ವಿಷಯದ ಗಂಭೀರತೆಯನ್ನು ಪರಿಗಣಿಸಿದ ಶಾಸಕ ಅಭಯ ಪಾಟೀಲ ಅವರು ಮೇ ೧೫ ರಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರಿಗೆ ಪತ್ರ ಬರೆದಿದ್ದರು. ಇಂದು ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಅವರನ್ನು ಭೇಟಿಯಾದ ಅವರು ಕಚೇರಿಯು ಸ್ಥಳಾಂತರದ ಆದೇಶವನ್ನು ರದ್ದುಪಡಿಸಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅಭಯ ಪಾಟೀಲ ಪ್ರವಾಸೋದ್ಯಮ ಸಚಿವರು ತಮ್ಮ ಆದೇಶವನ್ನು ಹಿಂಪಡೆದಿರುವ ಹಿನ್ನೆಲೆಯಲ್ಲಿ, ಕಚೇರಿಯು ಬೆಳಗಾವಿಯಲ್ಲಿಯೇ ಮುಂದುವರಿಯಲಿದೆ. ಪಾಟೀಲ ಅವರ ಪ್ರಯತ್ನಕ್ಕೆ ಬೆಳಗಾವಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Visits: 258

Leave a Reply

Your email address will not be published. Required fields are marked *

You cannot copy content of this page