ಶತಮಾನೋತ್ಸವ ಸಂಭ್ರಮ; ಕಲಿತ ಶಾಲೆಗೆ ಶಾಸಕ ಅಭಯ ಪಾಟೀಲ ವಿಶೇಷ ಕೊಡುಗೆ

 
ಬೆಳಗಾವಿ: ನಗರದ ದಕ್ಷಿಣ ಭಾಗದ ಶಾಸಕ ಅಭಯ ಪಾಟೀಲ ಅವರು ಶಹಾಪೂರ ಪ್ರದೇಶದ ಮೀರಾಪೂರ ಗಲ್ಲಿಯ ಚಿಂತಾಮಣರಾವ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.  ಎರಡು ವರ್ಷಗಳ ಹಿಂದೆ ತಾವು ಕಲಿತ ಶಾಲೆಯಲ್ಲಿ ‘ಗುರುವಂದನೆ’ ಎನ್ನುವ ವಿಶೇಷ ಕಾರ್ಯಕ್ರಮ ನಡೆಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು. ಈಗ ಶಾಸಕರು ಕಲಿತಿರುವ ಶಾಲೆಗೆ ಶತಮಾನೋತ್ಸವದ ಸಂದರ್ಭ.

ಈಗ ಶಾಸಕ ಅಭಯ ಪಾಟೀಲ ಅವರು ಕಲಿತಿರುವ ಶಾಲೆ ಈ ವರ್ಷ ಶತಮಾನೋತ್ಸವದ ಸಂಭ್ರಮ. ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಮತ್ತು ಈ ಸಂದರ್ಭದಲ್ಲಿ ಶಾಲೆಗೆ ವಿಶೇಷ ಕೊಡುಗೆ ನೀಡಲು ಶಾಸಕ ಪಾಟೀಲ ಮುಂದಾಗಿದ್ದಾರೆ.

ಕಲಿತ ಶಾಲೆಯನ್ನು ಮರೆಯದೇ ಈ ಶಾಲೆಯ ಅಭಿವೃದ್ಧಿಗೆ ಎರಡುವರೆ ಕೋಟಿ ಅನುದಾನ ಖರ್ಚು ಮಾಡಿದ್ದು ಈ ಶಾಲೆ ಇದೇ ವರ್ಷ ಶತಮಾನೋತ್ಸವದ ಸಂಬ್ರಮದಲ್ಲಿದ್ದು ಈ ಕಾರ್ಯಕ್ರಮವನ್ನು ಅರ್ಥಪೂರ್ಣ ಗೊಳಿಸಲು ಶಾಸಕ ಅಭಯ ಪಾಟೀಲ ಕೈಜೋಡಿಸಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಸುಮಾರು 2.50 ಕೋಟಿ ರೂಪಾಯಿಯಷ್ಟು ಅನುದಾನದಲ್ಲಿ ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದೆ.ಈಗ ಮತ್ತೆ ರೂ.1.25 ಕೋಟಿ ಅನುದಾನದಲ್ಲಿ ಶಾಲೆಯ ಸಭಾಗೃಹದ ನೂತನೀಕರಣ ಕಾಮಗಾರಿಗೆ ಶಾಸಕ ಪಾಟೀಲ ಚಾಲನೆ ನೀಡುವ ಮೂಲಕ ವಿಶೇಷ ಕೊಡುಗೆ ನೀಡಿದ್ದಾರೆ.

ಗುರುವಾರ ಶಾಲೆಗೆ ಭೇಟಿ ನೀಡಿದ ಶಾಸಕ ಅಭಯ ಪಾಟೀಲ ಶಾಲೆಯ ಗುರುಗಳ ಜೊತೆ ಶತಮಾನೋತ್ಸವದ ಕಾರ್ಯಕ್ರಮಗಳ ಕುರಿತು ಚರ್ಚೆ ಮಾಡಿ, ಶತಮಾನೋತ್ಸವದ ಅಂಗವಾಗಿ ಶಾಲೆಯ ಸಭಾಗೃಹದ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿದರು. ನೂತನ ಸಭಾಗೃಹಕ್ಕೆ ಹೆಚ್.ಹೆಚ್. ರಾಜಲಜ್ಷ್ಮೀ ರಾಜೆ,ವಿಜಯಸಿಂಹ ರಾಜೆ,ಪಟವರ್ದನ್ ಸಭಾಗೃಹ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ. ಚಿಂತಾಮಣರಾವ ಶಾಲೆ ಸರ್ಕಾರಿ ಶಾಲೆಯಾಗಿದ್ದು 1920 ರಲ್ಲಿ ಸ್ಥಾಪಿತಗೊಂಡಿದೆ.

Leave a Reply

Your email address will not be published. Required fields are marked *

You cannot copy content of this page