ರಾಮದುರ್ಗದ ಶಬರಿಕೊಳ್ಳದಲ್ಲಿ ಸಚಿವ ಸುರೇಶ ಅಂಗಡಿ, ಬಿಜೆಪಿ ಕಾರ್ಯಕರ್ತರಿಂದ ಪೂಜೆ

ಬೆಳಗಾವಿ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಭೂಮಿಪೂಜೆಯ ಸುಸಂದರ್ಭದಲ್ಲಿ ರೇಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಮತ್ತು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ರಾಮದುರ್ಗ ತಾಲೂಕಿನ ಪುಣ್ಯಭೂಮಿ ಶಬರಿ ಕೊಳ್ಳದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಶ್ರೀರಾಮನ ಹೆಜ್ಜೆಗಳು ಬಿದ್ದಿರುವ ದೇಶದ ಎಲ್ಲ ಪವಿತ್ರ ಸ್ಥಾನಗಳನ್ನು ಜೋಡಿಸುವ ಒಂದು ಸರ್ಕೀಟ್ ರಚನೆ ಮಾಡುವುದಾಗಿ ಇಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಂತಹ ಸರ್ಕೀಟ್ ರಚನೆಯಾದರೆ ರಾಮದುರ್ಗದ ಶಬರಿಕೊಳ್ಳಕ್ಕೆ ತುಂಬಾ ಮಹತ್ವ ಬರಲಿದೆ. ಏಕೆಂದರೆ ಶ್ರೀರಾಮಚಂದ್ರ ಶಬರಿಯನ್ನು ಭೇಟಿಯಾಗಿದ್ದು, ಅವಳು ಕೊಟ್ಟ ಎಂಜಲು ಬಾರಿಹಣ್ಣು ತಿಂದಿದ್ದು, ಇದೇ ಪ್ರದೇಶದಲ್ಲಿ ಎಂದು ಪೌರಾಣಿಕ ಹಿನ್ನೆಲೆಯಿದೆ.

ಕಾರ್ಯಕ್ರಮದಲ್ಲಿ ಉಪ ಸಭಾಧ್ಯಕ್ಷ ಆನಂದ ಮಾಮನಿ, ರಾಮದುರ್ಗ ಶಾಸಕರಾದ ಮಹಾದೇವಪ್ಪ ಯಾದವಾಡ ಹಾಗೂ ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸಂಜಯ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ, ಮಹೇಶ್ ಮಾಹಿತಿ ಹಾಗೂ ಸುಭಾಷ್ ಪಾಟೀಲ್, ಮಂಡಲ ಅಧ್ಯಕ್ಷ ರಾಜೇಶ್ ಬೀಳಗಿ ಮಲ್ಲಣ್ಣ ಯಾದವಾಡ ಮಾತ್ರವಲ್ಲದೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *

You cannot copy content of this page