ಕೋವಿಡ್-19 ನಿಯಂತ್ರಿಸಲು ಬೆಳಗಾವಿಯ ಕೆ.ಎಲ್.ಇ ಆಯುರ್ವೇದ ಆಸ್ಪತ್ರೆಯಲ್ಲಿ ಔಷಧಿ ಲಭ್ಯ

ಕೊರೋನಾ ವೈರಸ್ನ ಒಂದು ಪ್ರಬೇಧವಾದ ಕೋವಿಡ್-19 (COVID 19) ಎಂಬ ರೋಗಕಾರಕ ಸೂಕ್ಷ್ಮಜೀವಿಯು, ಸಾಂಕ್ರಾಮಿಕ ಜಾತಿಗೆ ಸೇರಿದ ವೈರಸ್ ಆಗಿರುವುದರಿಂದ ಮಾರಕ ಕಾಯಿಲೆಯಾಗಿದ್ದು, ಭಾರತವೂ ಸೇರಿದಂತೆ ಜಗತ್ತಿನ ಇತರೇ ರಾಷ್ಟ್ರಗಳಲ್ಲಿಯೂ ಇದು ಭಾರೀ ಆತಂಕವನ್ನು ಹೆಚ್ಚಿಸಿದೆ. ನಮ್ಮ ಸುತ್ತಮುತ್ತಲಿರುವ ಜನರ ನಡುವೆ ಅಂತರ ಕಾಯ್ದುಕೊಂಡು ಎಚ್ಚರಿಕೆಯಿಂದ ಇರುವುದೇ ಅತ್ಯುತ್ತಮ ಉಪಾಯಗಳಲ್ಲೊಂದು.  

 ಕಾಯಿಲೆಯ ಲಕ್ಷಣಗಳು:

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೊರೋನಾ ವೈರಸ್ ಕೇವಲ ಸಣ್ಣ ಶೀತ ಮತ್ತು ನೆಗಡಿಯಿಂದ ಪ್ರಾರಂಭವಾಗಿ ಶ್ವಾಸಕೋಶಕ್ಕೆ ತೊಂದರೆಯನ್ನುಂಟು ಮಾಡುವ ವೈರಸ್‍ ಅಗಿರುತ್ತದೆ. ಈ ವೈರಾಣು ಸಂಕ್ರಮಣದಿಂದ ಜ್ವರ, ಕೆಮ್ಮು, ಶೀತ, ಉಸಿರುಗಟ್ಟಿದಂತಾಗುವುದು ಮತ್ತು ಉಸಿರಾಡಲು ಕಷ್ಟವಾಗುವುದು. ಈ ವೈರಸ್‍ ಜೀವಾಣು ಸಂಪೂರ್ಣ ಶ್ವಾಸಕೋಶವನ್ನು ಆವರಿಸುತ್ತಾ ಹೋಗಿ, ಸಕಾಲದಲ್ಲಿ ಸಮರ್ಪಕ ಚಿಕಿತ್ಸೆ ಮತ್ತು ಉಪಚಾರ ದೊರೆಯದಿದ್ದರೆ ಮರಣವು ಸಂಭವಿಸಬಹುದು.  

ಕೊರೊನಾ ವೈರಸ್ ಹರಡುವುದು ಹೇಗೆ?

·        ಸಾಮಾನ್ಯವಾಗಿ ಕೊರೊನಾ ವೈರಸ್ ಒಬ್ಬ ಮನುಷ್ಯನಿಂದ ಮತ್ತೊಬ್ಬನಿಗೆ  

·        ಶೀನು ಮತ್ತು ಕೆಮ್ಮುವಿಕೆಯಿಂದ

·        ಸ್ಪರ್ಶ ಮತ್ತು ಹಸ್ತಲಾಘವದಿಂದ

·        ವೈರಸ್ ನಿಂದ ಸೋಂಕಿತಕ್ಕೊಳಗಾದ ವಸ್ತುವನ್ನು ಮುಟ್ಟುವುದು, ಇದರ ಬಳಿಕ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಕೈ ತೊಳೆಯದೆ ಮುಟ್ಟಿದರೆ.

·        ವಯೋಭೇದವೆನ್ನದೇ ಯಾರಿಗಾದರೂ ಸಹ ಕೊರೊನಾ ವೈರಸ್ ಬರಬಹುದು.                    

·        ಸಣ್ಣ ಮಕ್ಕಳಿಗೆ ಇದು ಬಹು ಬೇಗನೆ ಹರಡುವುದು ಹಾಗೂ ದುರ್ಬಲ ಪ್ರತಿರೋಧಕ ವ್ಯವಸ್ಥೆ ಹೊಂದಿರುವಂತಹ ಶಿಶುಗಳು ಮತ್ತು ವಯಸ್ಸಾದವರಲ್ಲಿ ಇದು ಬಹು ಬೇಗನೆ ಹರಡುವುದು.

·        ಅಪರೂಪದಲ್ಲಿ ಮಲದ ಮೂಲಕವೂ ಇದು ಹರಡಬಹುದು.

ಕೊರೊನಾ ವೈರಸ್ ಪತ್ತೆ ಮಾಡುವುದು ಹೇಗೆ?

ಕೊರೋನಾ ವೈರಸ್ ಪತ್ತೆ ಮಾಡಲು ವೈದ್ಯರು, ರಕ್ತ ಪರೀಕ್ಷೆ ಮಾಡಬಹುದು. ಕಫ, ಗಂಟಲಿನ ಸ್ವಾಬ್ ನ ಮಾದರಿ ಮತ್ತು ಇತರ ಉಸಿರಾಟದ ಪರೀಕ್ಷೆ ಮಾಡಿಸಬಹುದು.

ಕೊರೋನಾ ವೈರಸ್ಗೆ ಚಿಕಿತ್ಸೆ:

      ಈ ವೈರಸ್ ದಾಳಿಯಿಂದ ಬರುವ ರೋಗಕ್ಕೆ ಯಾವುದೇ ಔಷಧಿ ಚಿಕಿತ್ಸೆ ಇಲ್ಲ. ಕೇವಲ ಈ ರೋಗದ ಜೀವಾಣು ಸಂಕ್ರಮಣವನ್ನುತಡೆಗಟ್ಟುವಿಕೆಯೊಂದೇ ಉಳಿದಿರುವ ಮಾರ್ಗ. ವೈರಸ್ ಪೀಡಿತ ರೋಗಿಯನ್ನು ಇತರ ಜನರಿಂದ   ಬೇರ್ಪಡಿಸಿ ಚಿಕಿತ್ಸೆ ಒದಗಿಸಬಹುದು ಅಷ್ಟೇ. ಇದು ನವೀನ ವೈರಸ್ ಸೋಂಕು ಆಗಿರುವುದರಿಂದ ಯಾವುದೇ ತರಹದ ಆಂಟಿಬಯೋಟಿಕ್ ಔಷಧಿಗಳು ಕೆಲಸ ಮಾಡುವುದಿಲ್ಲ. ಸಂಪೂರ್ಣ ಕಾಯಿಲೆಯನ್ನು ವಾಸಿ ಮಾಡುವ ಔಷಧಿಯು ಇನ್ನೂ ಲಭ್ಯವಾಗಿಲ್ಲದಿರುವುದರಿಂದ, ನಮ್ಮ ಶರೀರದ ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸಬೇಕು. ಒಂದು ಆಶ್ಚರ್ಯಕರ ವಿಷಯವೆಂದರೆ ಈ ರೋಗದ ಯಾವುದೇ ಗುಣ ಲಕ್ಷಣಗಳನ್ನು ಹೊಂದಿರದ ವ್ಯಕ್ತಿಗಳಲ್ಲಿಯೂ ಕೂಡ, ಕೊರೋನಾ ವೈರಸ್ ಪತ್ತೆಯಾಗಿದೆ. ಈ ವೈರಾಣು, ಮನುಷ್ಯನ ದೇಹವನ್ನು ಸಂಪೂರ್ಣವಾಗಿ ಆವರಿಸಿಕೊಂಡು ಲಕ್ಷ್ಯಣಗಳು ವ್ಯಕ್ತವಾಗಲು 14 ದಿನಗಳ ಕಾಲಮಿತಿ ಇರುತ್ತದೆ.  

ಕೊರೋನಾ ವೈರಸ್ ಹರಡದಂತೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳು:

1.      ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ಹಾಗೂ ವೈಯುಕ್ತಿಕವಾಗಿ ಶುಚಿತ್ವವನ್ನು ಕಾಪಾಡಿಕೊಳ್ಳುವುದು:

     ನಮ್ಮ ಸುತ್ತ-ಮುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಂಡು ಅದರ ನಿರ್ವಹಣೆ ಮಾಡುವುದರ ಜೊತೆಗೆ ನಾವೂ ಕೂಡ ವೈಯುಕ್ತಿಕವಾಗಿ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯ. ಅಲ್ಕೋಹಾಲ್ ಹೊಂದಿರುವ ಕೈ ತೊಳೆಯುವ ಸೋಂಕು-ನಿವಾರಕ ದ್ರಾವಣದಿಂದ ಅಥವಾ ಸೋಪು ಉಪಯೋಗಿಸಿ ಕನಿಷ್ಟ ಇಪ್ಪತ್ತು ಸೆಕೆಂಡುಗಳ ಕಾಲವಾದರೂ ಕೈಗಳನ್ನು ತೊಳೆದುಕೊಳ್ಳಬೇಕು. ಇದು ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ಮೊದಲ ಪರಿಹಾರವಾಗಿದೆ. 

2.       ಜನಜಂಗುಳಿಯಿಂದ ದೂರವಿರುವುದು

       ಕೊರೋನಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುವ ರೋಗವಾದ್ದರಿಂದ ನಮ್ಮ ಸುತ್ತ-ಮುತ್ತ ಓಡಾಡುವ ಜನರಲ್ಲಿ ಯಾರಿಗೆ ಈ ವೈರಸ್ ಈಗಾಗಲೇ ತಗುಲಿದೆ ಎಂದು ಕಂಡು ಹಿಡಿಯುವುದು ಕಷ್ಟ. ಹೊರಗಡೆ ಮಾರುಕಟ್ಟೆ, ಶಾಪಿಂಗ್ ಮಾಲ್, ಸಿನಿಮಾ, ಪಾರ್ಟಿ, ಹೋಟೆಲ್ ಎಂಬಿತ್ಯಾದಿ ಪ್ರದೇಶಗಳಿಗೆ ಹೊರಡುವ ಮುಂಚೆ ಮುಖಕ್ಕೆ ಮಾಸ್ಕ್ ಧರಿಸಿ ಪ್ರಯಾಣಿಸಲು ಸಿದ್ದರಾಗಬೇಕು ಮತ್ತು ಮನೆಗೆ ಬಂದ ನಂತರ ಮೊದಲು ನಿಮ್ಮ ಬಟ್ಟೆಗಳನ್ನು ಬದಲಿಸಿ ಅವುಗಳನ್ನು ವಾಶ್ ಮಾಡಿ ಜೊತೆಗೆ ನೀವು ಕೂಡ ಸ್ನಾನ ಮಾಡಿ ದೈಹಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.  

3.       ಜ್ವರ ಮತ್ತು ಕೆಮ್ಮು ಹೊಂದಿರುವವರಿಂದ ಅಂತರವಿರಲಿ:  ಒಂದು ವೇಳೆ ಯಾರಿಗಾದರೂ ಜ್ವರ ಅಥವಾ ಉಸಿರಾಟದ ತೊಂದರೆ ಇರುವುದು ನಿಮ್ಮ ಗಮನಕ್ಕೆ ಬಂದರೆ ಆದಷ್ಟು ಅವರಿಂದ ದೂರ ಇರುವುದು ಒಳ್ಳೆಯದು. ಇದು ವೈರಸ್ ಸೋಂಕು ಕಾಯಿಲೆ ಆಗಿರುವುದರಿಂದ ಸೋಂಕಿತ ವ್ಯಕ್ತಿಯ ಜೊತೆಗಿನ ಹತ್ತಿರದ ಸಂವಹನ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್ ಅಥವಾ ಕೈವಸ್ತ್ರ ಬಳಸುವುದು ಉತ್ತಮ. ಮೊಣಕೈ ಅಡ್ಡ ಹಿಡಿದಿದ್ದರೆ ತಕ್ಷಣವೇ ಆ ಭಾಗವನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ನಾಲ್ಕು ಜನರ ನಡುವೆ ಇರುವಾಗ ಮಾಸ್ಕ್ ಧರಿಸಿ ರಕ್ಷಣೆ ಪಡೆಯಬೇಕು. ಒಂದು ವೇಳೆ ನಿಮಗೆ ಜ್ವರ, ಕೆಮ್ಮು ಮೊದಾಲಾದವು ಎದುರಾಗಿದ್ದರೆ ಕೆಲಸಕ್ಕೆ ಹೋಗದೇ ತಕ್ಷಣವೇ ವೈದ್ಯಕೀಯ ತಪಾಸಣೆಗೆ ಒಳಗೊಳ್ಳಿ. ಅದರಲ್ಲೂ ಜ್ವರ, ಉಸಿರಾಟಕ್ಕೆ ಕಷ್ಟವಾಗುವುದು ಮೊದಲಾದ ಲಕ್ಷಣಗಳಿದ್ದರೆ ತಕ್ಷಣವೇ ವೈದ್ಯಕೀಯ ನೆರವು ಪಡೆಯಿರಿ. ಕೆಮ್ಮು ಮತ್ತು ಗಂಟಲು ನೋವು ಕಡಿಮೆ ಮಾಡಲು ಬಿಸಿ ನೀರಿನ ಸೇವನೆ ಹಾಗೂ ಸ್ನಾನ ಮಾಡುವುದು ಒಳ್ಳೆಯದು. ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಕಾಯಿಸಿ ಆರಿಸಿದ  ನೀರನ್ನೇ ಸೇವಿಸಬೇಕು.

ಕೆ.ಎಲ್.ಇ ಸಂಸ್ಥೆಯ ಆಯುರ್ವೇದ ಫಾರ್ಮಸಿಯು ಬೆಳೆದು ಬಂದ ದಾರಿ:

ಕೆ.ಎಲ್.ಇ ಸಂಸ್ಥೆಯ ಆಯುರ್ವೇದ ಫಾರ್ಮಸಿಯು 1938 ರಲ್ಲಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಭೋಧನಾ ಫಾರ್ಮಸಿಯಾಗಿ ಅಸ್ಥಿತ್ವಕ್ಕೆ ಬಂದು, ಬೆಂಗಳೂರಿನ ಡ್ರಗ್ ಲೈಸೆನ್ಸಿಂಗ್ ಅಥೊರಿಟಿಯಿಂದ 1974 ರಲ್ಲಿ ಎಯುಎಸ್/37 ಲೈಸೆನ್ಸ್ ಪಡೆಯಿತು. ಇದರ ಜೊತೆಗೆ 2005 ರಲ್ಲಿ ಗುಡ್ ಮ್ಯಾನುಫ್ಯಾಕ್ಚರಿಂಗ್ ಪ್ರಾಕ್ಟೀಸ್ ಸರ್ಟಿಫಿಕೇಶನ್ ಪಡೆಯಿತು. 2011 ರಲ್ಲಿ ಆಯುರ್ವೇದ ಫಾರ್ಮಸಿಯು ಬೆಳಗಾವಿ ಮಹಾನಗರ ಪಾಲಿಕೆಯಿಂದ ಆಹಾರ ಉತ್ಪಾದನಾ ಅನುಮತಿ ಪಡೆದು ಊರ್ಜಾ ಹರ್ಬಲ್ ಟೀ ಹಾಗೂ ಶುದ್ಧ ಜೇನುತುಪ್ಪ ತಯಾರಿಸಲು ಪ್ರಾರಂಭಿಸಲಾಯಿತು. ಪ್ರಸ್ತುತ ಆಯುರ್ವೇದ ಫಾರ್ಮಸಿಯು 299 ಶಾಸ್ತ್ರಿಯ, 10 ಕೆ.ಎಲ್.ಇ ಸ್ವಾಮ್ಯದ ಮತ್ತು 2 ಅಹಾರ ಉತ್ಪನ್ನಗಳು ಸೇರಿ ಒಟ್ಟು 311 ಔಷಧಿಗಳನ್ನು ಉತ್ಪಾದಿಸುತ್ತಿದೆ.

ಕೊರೋನಾ ವೈರಸ್ ಸೋಂಕು ನಿವಾರಕ ಔಷಧಿಗಳ ತಯಾರಿಕೆಯಲ್ಲಿಯೂ ಮುಂಚೂಣಿ:

ಕೆ.ಎಲ್.ಇ ಆಯುರ್ವೇದ ಆಸ್ಪತ್ರೆಯು, ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮ, ಮಾಹಿತಿ ಹಾಗೂ ಸಲಹೆಗಳನ್ನು ನೀಡಿ, ಜಾಗೃತಿ ಕರಪತ್ರಗಳನ್ನು ಹಂಚಲಾಗುತ್ತಿದೆ. ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ, ಸೋಂಕು ಹರಡದಂತೆ ತಡೆಯವ ಮುನ್ನೆಚ್ಚರಿಕಾ ಕ್ರಮಗಳನ್ನೂ ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಿದೆ. ಆಯುರ್ವೇದ ಚಿಕಿತ್ಸೆಯಿಂದ ಕೊರೋನಾ  ಗುಣಪಡಿಸಬಹುದು.  ಕೆ.ಎಲ್.ಇ ಸಂಸ್ಥೆಯ ಆಯುರ್ವೇದ ಫಾರ್ಮಸಿಯು, ಈ ಕೆಳಕಂಡ ಆಯುರ್ವೇದ ಔಷಧೀಗಳನ್ನು ತಯಾರಿಸಿದ್ದು, ಅವು ಕೊರೋನಾ ಸಾಂಕ್ರಾಮಿಕ ರೋಗವನ್ನು ಚಿಕಿತ್ಸಿಸಲು ಅತ್ಯುಪಯುಕ್ತವೆನಿಸಿವೆ.

ಸುರಕ್ಷಾಕಿಟ್: ಆರೋಗ್ಯವನ್ನು ಮೇಲ್ದರ್ಜೆಗೆ ಕೊಂಡೊಯ್ಯಲು ಹಾಗೂ ಜನಪದ ಸಾಂಕ್ರಾಮಿಕ ವ್ಯಾಧಿಗಳ ನಿರ್ಮೂಲನೆಯಲ್ಲಿ ಬಹುಪಯೋಗಿ ಸುರಕ್ಷಾಕಿಟ್ ಅನ್ನು ವಿಶೇಷವಾಗಿ ಕೆಳಕಂಡ ಅಂಶಗಳ ಆಧಾರದಿಂದ ತಯಾರಿಸಲಾಗಿದೆ.

–         ಕಾಲಕ್ಕೆ ಅನುಗುಣವಾಗಿ ಆಯುರ್ವೈದ್ಯ ವಿಜ್ಣ್ಯಾನದ ತಳಹದಿಯೊಂದಿಗೆ

–         ವ್ಯಾಧಿ ಚಿಕಿತ್ಸೆಗನುಗುಣವಾಗಿ

–         ಪೋಷಕಾಂಶಗಳ ತತ್ತ್ವದೊಂದಿಗೆ

–         ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೂತ್ರದೊಂದಿಗೆ

–         ಪರ್ಯಾವರಣ ಶುದ್ಧಿಯನ್ನು ಗಮನದಲ್ಲಿಟ್ಟುಕೊಂಡು

ಈ ರೀತಿ ಸುರಕ್ಷಾ ಕಿಟ್ – ಸಂಪೂರ್ಣ  ರಕ್ಷಣೆಯನ್ನು ಒದಗಿಸುತ್ತದೆ.

ಸುರಕ್ಷಾ ಕಿಟ್, ಈ ಕೆಳಗಿನ ಔಷಧಿ ಯೋಗಗಳನ್ನು ಒಳಗೊಂಡಿರುತ್ತದೆ.

೧. ಊರ್ಜಾ – ಹರ್ಬಲ್ ಟೀ: ನೈಸರ್ಗಿಕ ಉತ್ಸಾಹ ಹಾಗೂ ರೋಗ-ನಿರೋಧಕ ಶಕ್ತಿ ವರ್ಧಕ; 70-100 ಮಿಲಿ ಲೀಟರ್ ಪ್ರಮಾಣದಲ್ಲಿ, ದಿನಾಲೂ ೨ ಸಲ ಸೇವಿಸಬೇಕು.(ಉಪಯೋಗಿಸುವ ಪದ್ಧತಿಯನ್ನು ಔಷಧಿ ಪ್ಯಾಕ್ ಒಳಗಡೆಯಿರಿಸಲಾದ ಸೂಚನಾಪತ್ರದಲ್ಲಿ ವಿವರಿಸಲಾಗಿದೆ)

೨. ಓಜ (ಪೊಷಕಾಂಶಗಳಿಂದ ಸತ್ವಭರಿತವಾದ ಚ್ಯವನಪ್ರಾಶ ಅವಲೇಹ): ನೈಸರ್ಗಿಕ ಜೀವಸತ್ವ-ಸಿ ಯುಕ್ತ, ಖನಿಜಾಂಶಗಳಿಂದ ಸಂಪದ್ಭರಿತ  ಹಾಗೂ ರಸಾಯನಗುಣಯುಕ್ತ ಅಂಶಗಳನ್ನು ಒಳಗೊಂಡಿರುತ್ತದೆ.

೩. ಸಂಸ್ಕಾರಿಸಲ್ಪಟ್ಟ ತಿಲ ತೈಲ (ಎಳ್ಳೆಣ್ಣೆ): ಮೂಗಿನೊಳಗಡೆಯ ಮೇಲ್ಪದರನ್ನು ಸದೄಢಗೊಳಿಸುತ್ತದೆ. ಅಲರ್ಜಿಗಳಿಂದ ಮುಕ್ತಿಗೊಳಿಸುತ್ತದೆ.

(ಉಪಯೋಗಿಸುವ ಪದ್ಧತಿಯನ್ನು ಔಷಧಿ ಪ್ಯಾಕ್ ಒಳಗಡೆ ಸೂಚನಾಪತ್ರದಲ್ಲಿ ವಿವರಿಸಲಾಗಿದೆ)

೩. ಧೂಪ (ಔಷಧೀ ಗಿಡಮೂಲಿಕೆಗಳಿಂದ ತಯಾರಿಸಿದ್ದು): ಜೀವಾಣುಗಳ ಸಮೂಹವನ್ನು ನಾಶಪಡಿಸಿ, ನಿಮ್ಮ ಸುತ್ತಲಿನ ಪರಿಸರವನ್ನು, ವಾಯುವನ್ನು ವಿಶುದ್ಧಗೊಳಿಸುತ್ತದೆ.

೨. ಅಪುನರ್ಭವ ಕಿಟ್: ಈ ಕಿಟ್, ರೋಗದ ವಿರುದ್ಧ ಹೋರಾಡಿ, ದೇಹದ ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಕೊರೋನಾ ರೋಗವು ಮರುಕಳಿಸದಂತೆ ಮಾಡಲು ನೆರವಾಗುತ್ತದೆ.

ಅಪುನರ್ಭವ ಕಿಟ್, ಈ ಕೆಳಗಿನ ಔಷಧಿ ಯೋಗಗಳನ್ನು ಒಳಗೊಂಡಿರುತ್ತದೆ.

೧. ಊರ್ಜಾ – ಹರ್ಬಲ್ ಟೀ: ನೈಸರ್ಗಿಕ ಉತ್ಸಾಹ ಹಾಗೂ ರೋಗ-ನಿರೋಧಕ ಶಕ್ತಿ ವರ್ಧಕ; 70-100 ಮಿಲಿ ಲೀಟರ್ ಪ್ರಮಾಣದಲ್ಲಿ, ದಿನಾಲೂ ೨ ಸಲ ಸೇವಿಸಬೇಕು.

(ಉಪಯೋಗಿಸುವ ಪದ್ಧತಿಯನ್ನು ಔಷಧಿ ಪ್ಯಾಕ್ ಒಳಗಡೆಯಿರಿಸಲಾದ ಸೂಚನಾಪತ್ರದಲ್ಲಿ ವಿವರಿಸಲಾಗಿದೆ).

೨. ಓಜ (ಪೊಷಕಾಂಶಗಳಿಂದ ಸತ್ವಭರಿತವಾದ ಚ್ಯವನಪ್ರಾಶ ಅವಲೇಹ): ನೈಸರ್ಗಿಕ ಜೀವಸತ್ವ-ಸಿ ಯುಕ್ತ, ಖನಿಜಾಂಶಗಳಿಂದ ಸಂಪದ್ಭರಿತ ಹಾಗೂ ರಸಾಯನಗುಣಯುಕ್ತ ಅಂಶಗಳನ್ನು ಒಳಗೊಂಡಿರುತ್ತದೆ.

೩. ಕವಚ: (ವಿಶೇಷವಾಗಿ ಕ್ವಾರಂಟೈನ್ ಗೆ ಒಳಗಾದ ಹಾಗೂ ಆವಸ್ಥೆಗನುಗುಣವಾಗಿ ಪ್ರತ್ಯೇಕಿಸಲ್ಪಟ್ಟ ರೋಗಿಗಳಿಗೆ ಸಿದ್ದಪಡಿಸಲಾದ ಔಷಧೀ ಯೋಗಗಳು) ಕವಚ ಕಿಟ್,  ಈ ಕೆಳಗಿನ ಔಷಧಿ ಯೋಗಗಳನ್ನು ಒಳಗೊಂಡಿರುತ್ತದೆ.

೧. ತಾಲೀಸಾದೀ ಚೂರ್ಣ:  ಶ್ವಾಸಕೋಶವನ್ನು ಸದೃಢಗೊಳಿಸಿ, ಎದೆಯು ಕಫದಿಂದ ತುಂಬುವಿಕೆಯನ್ನು ಹೋಗಲಾಡಿಸುತ್ತದೆ. ಕಫವನ್ನು ನಿಯಂತ್ರಿಸುತ್ತದೆ.                             (ಕಾಲು ಚಮಚ ಔಷಧಿಯನ್ನು ಜೇನುತುಪ್ಪದಜೊತೆಗೆ ಸೇವಿಸಬೇಕು).

೨.  ಸುದರ್ಶನ ಘನ ವಟಿ: ಎಲ್ಲಾ ತರಹದ ಕಫಾನುಬಂಧೀ ಜ್ವರ, ನೆಗಡೀ ಹಾಗೂ ಅಜೀರ್ಣ ಸಮಸ್ಯೆಯಲ್ಲಿ ಬಹಳ ಉಪಯುಕ್ತವಾದ್ ಔಷಧಿಯಾಗಿರುತ್ತದೆ. ಜೊತೆಗೆ ಯಕೃತ್ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಹಾಗೂ ರಕ್ತಶೋಧಕದಂತೆ ಕಾರ್ಯನಿರ್ವಹಿಸುತ್ತದೆ. (ದಿನಾಲೂ ಎರಡು ಮಾತ್ರೆಗಳನ್ನು ಮೂರು ಹೊತ್ತು, ಊಟವಾದ ನಂತರ ಸೇವಿಸಬೇಕು)

೩. ಊರ್ಜಾ – ಹರ್ಬಲ್ ಟೀ: ನೈಸರ್ಗಿಕ ಉತ್ಸಾಹ ಹಾಗೂ ರೋಗ-ನಿರೋಧಕ ಶಕ್ತಿ ವರ್ಧಕ; ೭೦-೧೦೦ ಮಿಲಿ ಲೀಟರ್ ಪ್ರಮಾಣದಲ್ಲಿ, ದಿನಾಲೂ ೨ ಸಲ ಸೇವಿಸಬೇಕು. (ಉಪಯೋಗಿಸುವ ಪದ್ಧತಿಯನ್ನು ಔಷಧಿ ಪ್ಯಾಕ್ ಒಳಗಡೆಯಿರಿಸಲಾದ ಸೂಚನಾಪತ್ರದಲ್ಲಿ ವಿವರಿಸಲಾಗಿದೆ)

೪. ಓಜ (ಪೊಷಕಾಂಶಗಳಿಂದ ಸತ್ವಭರಿತವಾದ ಚ್ಯವನಪ್ರಾಶ ಅವಲೇಹ): ನೈಸರ್ಗಿಕ ಜೀವಸತ್ವ-ಸಿ ಯುಕ್ತ, ಖನಿಜಾಂಶಗಳಿಂದ ಸಂಪದ್ಭರಿತ  ಹಾಗೂ ರಸಾಯನಗುಣಯುಕ್ತ ಅಂಶಗಳನ್ನು ಒಳಗೊಂಡಿರುತ್ತದೆ.

೫. ಸಂಸ್ಕಾರಿಸಲ್ಪಟ್ಟ ತಿಲ ತೈಲ (ಎಳ್ಳೆಣ್ಣೆ):  ಮೂಗಿನೊಳಗಡೆಯ ಮೇಲ್ಪದರನ್ನು ಸದೄಢಗೊಳಿಸುತ್ತದೆ. ಅಲರ್ಜಿಗಳಿಂದ ಮುಕ್ತಿಗೊಳಿಸುತ್ತದೆ.                       (ಉಪಯೋಗಿಸುವ ಪದ್ಧತಿಯನ್ನು ಔಷಧಿ ಪ್ಯಾಕ್ ಒಳಗಡೆ  ಸೂಚನಾಪತ್ರದಲ್ಲಿ ವಿವರಿಸಲಾಗಿದೆ)

೩. ಧೂಪ (ಔಷಧೀ ಗಿಡಮೂಲಿಕೆಗಳಿಂದ ತಯಾರಿಸಿದ್ದು): ಜೀವಾಣುಗಳ ಸಮೂಹವನ್ನು ನಾಶಪಡಿಸಿ, ನಿಮ್ಮ ಸುತ್ತಲಿನ ಪರಿಸರವನ್ನು, ದೂಷಿತ ವಾಯುವನ್ನು ವಿಶುದ್ಧಗೊಳಿಸುತ್ತದೆ.

ಇದರ ಜೊತೆಗೆ ನಮ್ಮದೇ ಔಷಧಿ ತಯಾರಿಕಾ ಘಟಕದ ಇತರೇ ಉಪಯುಕ್ತ ಔಷಧಿಗಳಾದ

–         ಅಶ್ವೆಗಂಧ ರಸಾಯನ / ಅಶ್ವೆಗಂಧ ಅವಲೇಹ

–         ಸಂಶಮನೀ ವಟಿ

–         ಅಮೃತಾರಿಷ್ಟ

–         ಸುದರ್ಶನ ಘನ ವಟಿ

–         ಆಯುಷ್ ಕ್ವಾಥ ಚೂರ್ಣ  ಔಷಧಿಗಳೂ ಸಹ ಲಭ್ಯವಿರುತ್ತವೆ.

ಈ ಮೂರೂ ಔಷಧಿಗಳ ಕಿಟ್ ಹಾಗೂ ಇತರೇ ಔಷಧಿಗಳು ದೊರೆಯುವ ಸ್ಥಳ:

ಕೆ.ಎಲ್.ಇ ಸಂಸ್ಥೆಯ ಶ್ರೀ. ಬಿ.ಎಮ್.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ಶಹಾಪುರ ಬೆಳಗಾವಿ – 590003.

Ph.no – 0832/2486286; Website: www.kleayurworld.edu.in

ಲೇಖಕರು: ಡಾ|| ಸಂಜೀವ ಟೊಣ್ಣಿ ಎಮ್.ಡಿ (ಆಯುರ್ವೇದ)

ಸಹ-ಪ್ರಾಧ್ಯಾಪಕರು,

ಸ್ವಸ್ಥವೃತ್ತ ಮತ್ತು ಯೋಗ ವಿಭಾಗ ಹಾಗೂ

ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿಗಳು

ಕೆ.ಎಲ್.ಇ ಸಂಸ್ಥೆಯ ಶ್ರೀ. ಬಿ.ಎಮ್.ಕಂಕಣವಾಡಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ,

ಶಹಾಪೂರ, ಬೆಳಗಾವಿ.

Ph.No: 9448543858

E-mail: [email protected]

Leave a Reply

Your email address will not be published. Required fields are marked *

You cannot copy content of this page