ಪಡಿತರ ಇ-ಕೆವೈಸಿ ಮಾಡಿಸಿಕೊಳ್ಳಲು ಅವಧಿ ವಿಸ್ತರಣೆ; ಇದು ಕೊನೆಯ ಅವಕಾಶ

ಪಡಿತರ ಇ-ಕೆವೈಸಿ ಮಾಡಿಸಿಕೊಳ್ಳಲು ಅವಧಿ ವಿಸ್ತರಣೆ;  ಇದು ಕೊನೆಯ ಅವಕಾಶ

 

 

ಬೆಳಗಾವಿ: ಜಿಲ್ಲೆಯಲ್ಲಿರುವ ಅಂತ್ಯೋದಯ, ಆದ್ಯತಾ (ಬಿಪಿಎಲ್) ಹಾಗೂ ಆದ್ಯತೇತರ  (ಎಪಿಎಲ್) ಪಡಿತರ ಚೀಟಿದಾರರು ಇ-ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಲು ಕಾಲಾವಧಿಯನ್ನು ಸೆ.30ರವರೆಗೆ ವಿಸ್ತರಿಸಲಾಗಿದೆ.

 

ಸೆ. 11 ರಿಂದ 15 ರವರೆಗೆ ಪ್ರತಿ ದಿನ ಆಯಾ ನ್ಯಾಯಬೆಲೆ ಅಂಗಡಿಗಳ ನಿಯಮಿತ ಸಮಯ ಅಂದರೆ ಬೆಳಿಗ್ಗೆ       7:00 ರಿಂದ 12:00 ಮಧ್ಯಾಹ್ನ 4:00 ರಿಂದ 8-00 ಗಂಟೆಯವರೆಗೆ ಇ-ಕೆವೈಸಿ ಸಂಗ್ರಹಣ ಕಾರ್ಯವನ್ನು ಮುಂದುವರೆಸಲಾಗುವುದು.

 

ಸೆ. 16 ರಿಂದ 30 ರವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ದಿನ ಮಧ್ಯಾಹ್ನ 12:00 ಗಂಟೆಯಿಂದ ಸಾಯಂಕಾಲ 4:00 ಗಂಟೆಯವರೆಗೆ ಮಾತ್ರ ಇ-ಕೆವೈಸಿ ಸಂಗ್ರಹಣ ಕಾರ್ಯವನ್ನು ನಿಯೋಜಿತ ನ್ಯಾಯಬೆಲೆ ಅಂಗಡಿಗಳಲ್ಲಿ ನಿರ್ವಹಿಸಲಾಗುವುದು.

ನಿಗದಿತ ವೇಳಾಪಟ್ಟಿಯಂತೆ ಸರ್ಕಾರವು ಜಿಲ್ಲೆಯ ಎಲ್ಲಾ ವರ್ಗದ ಪಡಿತರ ಚೀಟಿದಾರರಿಗೆ  ಇ ಕೆವೈಸಿಯನ್ನು ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿದ್ದು, ಅದರಂತೆ ಎಲ್ಲ ವರ್ಗದ ಪಡಿತರ ಚೀಟಿದಾರರು ತಪ್ಪದೇ   ಶೇ.100% ರಷ್ಟು ಅವರವರ ಪಡಿತರ ಚೀಟಿಗಳಲ್ಲಿರುವ ಎಲ್ಲಾ ಕುಟುಂಬಗಳ ಸದಸ್ಯರ ಇ-ಕೆವೈಸಿ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳಬೇಕು.

 

ಒಂದು ವೇಳೆ ಕಾರಣಾಂತರದಿಂದ ಇ-ಕೆವೈಸಿ ಮಾಡಿಸದೇ ಇರುವ ಪಡಿತರ ಚೀಟಿಗಳಲ್ಲಿನ ಸದಸ್ಯರಿಗೆ ಮುಂಬರುವ ದಿನಗಳಲ್ಲಿ ಸರ್ಕಾರವು ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಬಹುದು. ಇ-ಕೆವೈಸಿ ಮಾಡಿಸಲು ನಿಯೋಜಿತ ನ್ಯಾಯಬೆಲೆ ಅಂಗಡಿಗಳಿಗೆ ತೆರಳುವ ಕುಟುಂಬದ ಸದಸ್ಯರು ಸರ್ಕಾರ ನಿಗಧಿಪಡಿಸಿದ ಕೋವಿಡ್-19 ಮಾನದಂಡಗಳನ್ವಯ ಮಾಸ್ಕ್‍ನ್ನು ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತಮ್ಮ ಪಡಿತರ ಚೀಟಿಗೆ ಇ-ಕೆವೈಸಿ ಕಾರ್ಯವನ್ನು ಯಶಸ್ವಿಯಾಗಿ ಮಾಡಿಸಿಕೊಳ್ಳಲು ಈ ಅಂತಿಮ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.

 

ಇ-ಕೆವೈಸಿ ಸಂಗ್ರಹಣೆಗೆ ಜಿಲ್ಲೆಯ ಯಾವುದೇ ನ್ಯಾಯಬೆಲೆ ಅಂಗಡಿಕಾರರು ಹಣ ಕೇಳಿದ್ದಲ್ಲಿ ಅಥವಾ ದೂರುಗಳು ಇದ್ದರೆ ಆಯಾ ತಾಲ್ಲೂಕಿನ ತಹಶೀಲ್ದಾರರಿಗೆ ಹಾಗೂ ಸಹಾಯಕ ನಿರ್ದೇಶಕರು (ಅಪಕ್ಷೇ) ಬೆಳಗಾವಿ ಇವರಿಗೆ ಮತ್ತು ಆಯಾ ತಾಲ್ಲೂಕಿನ ಆಹಾರ ಶಿರಸ್ತೇದಾರರು/ಆಹಾರ ನಿರೀಕ್ಷಕರು ಇವರುಗಳಿಗೆ ಸಂಪರ್ಕಿಸಿ ದೂರು ನೀಡಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.