
ಕುರುಬರನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಸಿಎಂಗೆ ಮನವಿ ನೀಡಿ ಒತ್ತಾಯ
ಬೆಳಗಾವಿ: ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದ ಸಚಿವರು ಮತ್ತು ಶಾಸಕರನ್ನು ಒಳಗೊಂಡ ನಿಯೋಗವು ಇಂದು ಮುಂಜಾನೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಕುರುಬರನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿತು.
ಕುರುಬರನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕೆಂಬ ಒತ್ತಾಯ ತುಂಬಾ ಹಳೆಯದಾಗಿದ್ದು, ಇತ್ತೀಚಿಗೆ ಯಡಿಯೂರಪ್ಪನವರು ಮರಾಠರಿಗೆ ಮತ್ತು ವೀರಶೈವ-ಲಿಂಗಾಯತ ಸಮುದಾಯಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮಗಳ ಘೋಷಣೆ ಮಾಡಿದ ಬಳಿಕ, ಕುರುಬ ಸಮುದಾಯವೂ ತಮ್ಮ ಹಕ್ಕು ಪ್ರತಿಪಾದನೆಗೆ ಇಳಿದಿದೆ.
ಇದರ ಜೊತೆಗೆ ನೇಕಾರ ಸೇರಿದಂತೆ ಇತರೆ ಅನೇಕ ಸಮುದಾಯಗಳೂ ಈಗ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಹೋರಾಟಕ್ಕೆ ಅಣಿಯಾಗಿವೆ.