ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ; ಮುಖ್ಯಾಧ್ಯಾಪಕರಿಗೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ಮಹತ್ವದ ಸೂಚನೆ

ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ; ಮುಖ್ಯಾಧ್ಯಾಪಕರಿಗೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ಮಹತ್ವದ ಸೂಚನೆ

 

 

 

ಬೆಳಗಾವಿ: 2020 -21 ನೇ ಸಾಲಿನ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ ವಿದ್ಯಾರ್ಥಿಗಳ ನೋಂದಣಿ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪರಿಷ್ಕೃತ ಆದೇಶವೊಂದನ್ನು ಹೊರಡಿಸಿದೆ. ಆದೇಶದಲ್ಲಿ ಯಾವ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲು ಅರ್ಹರು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಆದೇಶದ ಪ್ರಕಾರ 2020 - 21 ರಲ್ಲಿ ಕೋವಿಡ್ ಅಥವಾ ಇತರೆ ಅನಾರೋಗ್ಯದ ಕಾರಣ ಮುಖ್ಯ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗದೆ ಇರುವ ಅಭ್ಯರ್ಥಿಗಳು ಮಾತ್ರ ಪೂರಕ ಪರೀಕ್ಷೆಗೆ ಅರ್ಹರು.

 

 

ಆದರೆ ಕೆಲವು ಶಾಲೆಗಳ ಮುಖ್ಯ ಶಿಕ್ಷಕರು 2020  - 21 ಕ್ಕಿಂತಲೂ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ 9ನೇ ತರಗತಿಯಿಂದ 10 ನೇ ತರಗತಿಗೆ ಉತ್ತೀರ್ಣರಾಗಿ, 10ನೇ ತರಗತಿಗೆ ಶಾಲೆ ಬಿಟ್ಟಂತಹ, ಅರ್ಧಕ್ಕೆ ಶಾಲೆ ಬಿಟ್ಟಂತಹ ಅಥವಾ ಹಾಜರಾತಿ ಕೊರತೆಯ ಕಾರಣ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ನೋಂದಾಯಿಸಿಕೊಳ್ಳದಂತಹ ವಿದ್ಯಾರ್ಥಿಗಳನ್ನೂ ಸಹ ಅವರ ಎಸ್.ಎ.ಟಿ.ಎಸ್ ಸಂಖ್ಯೆಯನ್ನು ಬಳಸಿ ಸಪ್ಟೆಂಬರ್ 2021ರ ಪೂರಕ ಪರೀಕ್ಷೆಗೆ ಆನಲೈನ್ ಮೂಲಕ ಶಾಲಾಲಾಗಿನ್ ನಲ್ಲಿ ಶಾಲಾ ವಿದ್ಯಾರ್ಥಿಯಾಗಿ ನೋಂದಾಯಿಸಿಕೊಳ್ಳುವುದನ್ನು ಗಮನಿಸಲಾಗಿದೆ.

 

 

ಇಲಾಖೆಯ ಪ್ರಕಾರ ಈ ರೀತಿ ಮಾಡುವುದು ನಿಯಮಬಾಹಿರ ಕ್ರಮವಾಗಿದ್ದು, ಇಂತಹ ವಿದ್ಯಾರ್ಥಿಗಳು ಸಪ್ಟೆಂಬರ್ 2020 -21 ರ ಪೂರಕ ಪರೀಕ್ಷೆಗೆ ನೋಂದಾಯಿಸಿರುವುದನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.