ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಅರ್ಹ ವಿದ್ಯಾರ್ಥಿಗಳಿಂದ ನೋಂದಣಿಗೆ ಅಧಿಸೂಚನೆ ಜಾರಿ

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಅರ್ಹ ವಿದ್ಯಾರ್ಥಿಗಳಿಂದ ನೋಂದಣಿಗೆ ಅಧಿಸೂಚನೆ ಜಾರಿ

 

 

ಬೆಳಗಾವಿ: 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಅರ್ಹ ವಿದ್ಯಾರ್ಥಿಗಳ ನೋಂದಣಿ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಸೂಚನೆ ಹೊರಡಿಸಿದೆ.

 

 2020-21 ನೇ ಸಾಲಿನ ಮುಖ್ಯ ಪರೀಕ್ಷೆಗೆ ನೋಂದಾಯಿಸಿ ಕೋವಿಡ್-19 ಮತ್ತು ಇತರೆ ಅನಾರೋಗ್ಯದ ಕಾರಣದಿಂದ ಪರೀಕ್ಷೆಗೆ ಗೈರುಹಾಜರಾದ ಮತ್ತು ನೋಂದಾಯಿಸದ ಅರ್ಹ ಶಾಲಾ ವಿದ್ಯಾರ್ಥಿಗಳು ಮಾತ್ರ ಈ ಪೂರಕ ಪರೀಕ್ಷೆಗೆ ನೋಂದಾಯಿಸಬಹುದಾಗಿದೆ.

ಜೊತೆಗೆ ಏಪ್ರಿಲ್-2019ರ ಮುಖ್ಯ ಪರೀಕ್ಷೆಯಿಂದ ಪ್ರಥಮ ಬಾರಿಗೆ ನೋಂದಾಯಿಸಿ ಅನುತ್ತೀರ್ಣರಾದ ಅರ್ಹ ಪುನರಾವರ್ತಿತ ಶಾಲಾ ವಿದ್ಯಾರ್ಥಿಗಳು, 2020-21 ನೇ ಸಾಲಿನ ಮುಖ್ಯ ಪರೀಕ್ಷೆಗೆ ನೋಂದಾಯಿಸಿ ಕೋವಿಡ್-19 ಮತ್ತು ಇತರೆ ಅನಾರೋಗ್ಯದ ಕಾರಣದಿಂದ ಪರೀಕ್ಷೆಗೆ ಗೈರುಹಾಜರಾದ ಅರ್ಹ ಖಾಸಗಿ ಅಭ್ಯರ್ಥಿಗಳು, ಏಪ್ರಿಲ್-2019ರ ಮುಖ್ಯ ಪರೀಕ್ಷೆಯಿಂದ ಪ್ರಥಮ ಬಾರಿಗೆ ನೋಂದಾಯಿಸಿ ಅನುತ್ತೀರ್ಣರಾದ ಅರ್ಹ ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ NSR ಮತ್ತು NSPR ಪುನರಾವರ್ತಿತ ವಿದ್ಯಾರ್ಥಿಗಳು 2011ಕ್ಕೂ ಹಿಂದಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಅರ್ಹ ಮನರಾವರ್ತಿತ ಶಾಲಾ ಮತ್ತು ಪಾಸಗಿ ಅಭ್ಯರ್ಥಿಗಳು ಹಾಗೂ ಏಪ್ರಿಲ್-2019 ರಿಂದ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ಪ್ರಥಮ ಬಾರಿಗೆ ನೋಂದಾಯಿಸಿ ಅನುತ್ತೀರ್ಣರಾದ NSR ಮತ್ತು NSPR ಅಭ್ಯರ್ಥಿಗಳು ಪೂರಕ ಪರೀಕ್ಷೆಗಾಗಿ ನೋಂದಾಯಿಸಬಹುದಾಗಿದೆ.