ನಿಪ್ಪಾಣಿ ನಗರಸಭೆ ಜ್ಯೂನಿಯರ್ ಇಂಜಿನಿಯರ್ ಎಸಿಬಿ ಬಲೆಗೆ

ಬೆಳಗಾವಿ: ನಿಪ್ಪಾಣಿ ನಗರಸಭೆಯ ಕಿರಿಯ ಅಭಿಯಂತರ ಮತ್ತು ಕಂಪ್ಯೂಟರ್ ಆಪರೇಟರ್ ಲಂಚ ಸ್ವೀಕರಿಸುವಾಗ ಭೃಷ್ಟಾಚಾರ ನಿಗ್ರಹ ದಳ (ಎಸಿಬಿ) ಕೈಗೆ ರೆಡ್ ಹ್ಯಾಂಡ್ ಆಗಿ ಇಂದು ಸಿಕ್ಕಿ ಬಿದ್ದಿದ್ದಾರೆ. ಎಸಿಬಿ ತಂಡ ಇಬ್ಬರೂ ಅಧಿಕಾರಿಗಳನ್ನು ವಶಕ್ಕೆ ಪಡೆದಿದೆ.

ಕಿರಿಯ ಅಭಿಯಂತರ ಸುಭಾಶ್ಚಂದ್ರ ಚೌಗಲಾ ಮತ್ತು ಕಂಪ್ಯೂಟರ್ ಆಪರೇಟರ್ ಸಾಗರ ಮೇಸ್ತ್ರಿ ಉರ್ಫ್ ಕಾಂಬಳೆ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಗುತ್ತಿಗೆದಾರ ಪ್ರಭಾಕರ ಗುಗ್ಗರಿ ಅವರಿಂದ ರೂ. 65 ಸಾವಿರ ಲಂಚ ಪಡೆಯುವಾಗ ಸಿಕ್ಕಿಹಾಕಿಕೊಂಡಿದ್ದಾರೆ. ಗುತ್ತಿಗೆದಾರ ಗುಗ್ಗರಿ ಈ ಕುರಿತಂತೆ ಎಸಿಬಿಗೆ ದೂರು ನೀಡಿದ್ದರು.

ಎಸಿಬಿ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಅವರ ಮಾರ್ಗದರ್ಶನದಲ್ಲಿ ಮತ್ತು ಡಿವೈಎಸ್ಪಿ ಶರಣಪ್ಪ ಅವರ ನೇತೃತ್ವದಲ್ಲಿ ಇನ್ಸಪೆಕ್ಟರ್ ಗಳಾದ ಅಡಿವೇಶ ಗುದಿಗೊಪ್ಪ, ಮಂಜುನಾಥ ಹಿರೇಮಠ, ಬಿ.ಎ.ಜಾಧವ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

Leave a Reply

Your email address will not be published. Required fields are marked *

You cannot copy content of this page