ಯುಪಿಎಸ್ಸಿ ತೇರ್ಗಡೆಯಾದ ಬೆಳಗಾವಿ ಜಿಲ್ಲೆಯ ನಾಲ್ಕು ಪ್ರತಿಭೆಗಳಿಗೆ ಅಭಿನಂದನೆಗಳ ಮಹಾಪೂರ

ಬೆಳಗಾವಿ: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ನಾಲ್ಕು ಮಂದಿ ಉತ್ತೀರ್ಣರಾಗಿದ್ದು, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ನಾಲ್ಕೂ ಪ್ರತಿಭೆಗಳಿಗೆ ಈಗ ಜಿಲ್ಲೆಯ ಮೂಲೆ ಮೂಲೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಅಥಣಿ ತಾಲೂಕಿನ ಜಗದೀಶ ಅಡಹಳ್ಳಿ (440 ನೇ ರ್ಯಾಂಕ್), ಹುಕ್ಕೇರಿ ತಾಲೂಕಿನ ಪ್ರಫುಲ್ ದೇಸಾಯಿ (532ನೇ ರ್ಯಾಂಕ್), ರಾಯಬಾಗ ತಾಲೂಕಿನ ಗಜಾನನ ಬಾಲೆ (663 ನೇ ರ್ಯಾಂಕ್) ಮತ್ತು ಚಿಕ್ಕೋಡಿ ತಾಲೂಕಿನ ಪ್ರಿಯಾಂಕಾ ಕಾಂಬಳೆ (670 ನೇ ರ್ಯಾಂಕ್) ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page