339 ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿ; ಅಭ್ಯರ್ಥಿಗಳ ದೈಹಿಕ ಪರೀಕ್ಷೆಗೆ ದಿನಾಂಕ ಪ್ರಕಟ

ಬೆಳಗಾವಿ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 339 ಅರಣ್ಯ ರಕ್ಷಕ ಹುದ್ದೆಗಳನ್ನು ನೇರ ನೇಮಕಾತಿ ಮಾಖಾಂತರ ಭರ್ತಿ ಮಾಡುವ ಕುರಿತಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಅಧಿಸೂಚನೆ ಹೊರಡಿಸಲಾಗಿದೆ.
ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಹಾಗೂ ಮೀಸಲಾತಿ ಅನುಸಾರ ಪರಿಗಣಿಸಿ ವೃತ್ತವಾರು 1:20 (ಹುದ್ದೆ; ಅಭ್ಯರ್ಥಿ) ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಸದರಿ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಪ್ರಸ್ತುತ ದೇಹದಾರ್ಢ್ಯತೆ, ದೈಹಿಕ ತಾಳ್ವಿಕೆ ಹಾಗೂ ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಯನ್ನು ನಡೆಸುವ ಕುರಿತಂತೆ ದೈಹಿಕ ಪರೀಕ್ಷಾ ದಿನಾಂಕ ಹಾಗೂ ಪರೀಕ್ಷಾ ಕೇಂದ್ರದ ವಿವರಗಳನ್ನು ಪ್ರಕಟಿಸಲಾಗಿದೆ.
ಪರೀಕ್ಷಾ ದಿನಾಂಕ ಹಾಗೂ ಪರೀಕ್ಷಾ ಕೇಂದ್ರದ ವಿವರಗಳು ಈ ಕೆಳಗಿನಂತಿವೆ