ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಸೆ.24 ರಂದು ವರ್ಚುವಲ್ ಸಂದರ್ಶನ ಶಿಬಿರ

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಸೆ.24 ರಂದು ವರ್ಚುವಲ್ ಸಂದರ್ಶನ ಶಿಬಿರ

 

 

ಬೆಳಗಾವಿ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಪಿಯುಸಿ, ಡಿಪ್ಲೋಮಾ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಶುಕ್ರವಾರ (ಸೆ.24) “ವರ್ಚುವಲ್ ಸಂದರ್ಶನ ಶಿಬಿರ”ವನ್ನು (Virtual walkin interview) ಆಯೋಜಿಸಲಾಗಿದೆ.

 

 

ಆಸಕ್ತ ಅಭ್ಯರ್ಥಿಗಳು https://www.sites.google.com/view/virtualwalkin  ಈ ವೆಬ್‍ಸೈಟ್‍ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಈ ಮೇಲಿನ ವೆಬ್‍ಸೈಟ್ ಮೂಲಕ ನೋಂದಾಯಿತ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಸೆ.23ರ ಸಾಯಂಕಾಲ 6:00 ಗಂಟೆಯವರೆಗೆ ಮೇಲ್ಕಂಡ ವೆಬ್‍ಸೈಟ್ ನೋಂದಣಿಗಾಗಿ ಲಭ್ಯವಿರುತ್ತದೆ.

 

         

ನೋಂದಾಯಿತ ಅಭ್ಯರ್ಥಿಗಳಿಗೆ ದಿನಾಂಕ, ಸಮಯ ಹಾಗೂ ವರ್ಚುವಲ್ ಲಿಂಕನ್ನು ಎಸ್.ಎಂ.ಎಸ್/ಕರೆ ಮುಖಾಂತರ ತಿಳಿಸಲಾಗುವುದು. ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವು ಉಚಿತವಾಗಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳು ಇರುವುದಿಲ್ಲ.

 

 

ಈ ಸಂದರ್ಶನದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಯಾದ  Grassroots BPO Pvt. Ltd., ನಲ್ಲಿ ಖಾಲಿ ಇರುವ  ಹುದ್ದೆಗಳಿಗಾಗಿ  ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ ಮೇಲ್ಕಂಡ ವೈಬ್‍ಸೈಟ್‍ಗೆ ಭೇಟಿ ನೀಡಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.