ಬೆಳಗಾವಿ: ಲೈಸೆನ್ಸ್ದಾರರು ಪಡೆದಿರುವ ಬಂದೂಕು ಪರವಾನಿಗೆಯಲ್ಲಿ ಶಸ್ತ್ರಾಸ್ತ್ರ (ತಿದ್ದುಪಡಿ) ಕಾಯ್ದೆ 2019 ರ ಕಲಂ 3 ರನ್ವಯ ಇತ್ತೀಚೆಗೆ ತಿದ್ದುಪಡಿ ಮಾಡಿದ ನಿಬಂಧನೆಯಡಿಯಲ್ಲಿ ಎರಡು ಆಯುಧಗಳನ್ನು ಮಾತ್ರ ಹೊಂದಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹೀರೆಮಠ ತಿಳಿಸಿದ್ದಾರೆ.
ಆದ್ದರಿಂದ ಮೂರನೇ ಬಂದೂಕಿಗೆ ಪರವಾನಿಗೆಯನ್ನು ಪಡೆದ ಪರವಾನಿಗೆದಾರರಿದ್ದಲ್ಲಿ ಅಂತಹವರಿಗೆ ಸೂಕ್ತ ತಿಳುವಳಿಕೆ ನೀಡಿ ಮೂರನೇ ಆಯುಧವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಜಮೆ ಮಾಡುವ ಕುರಿತು ಸೂಕ್ತ ಕ್ರಮ ಜರುಗಿಸುವಂತೆ ನಿರ್ದೇಶನವನ್ನು ನೀಡಿಲಾಗಿದ್ದು.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ನೀಡಿದ ಲೈಸೆನ್ಸ್ದಾರರು ಮೂರು ಆಯುಧಗಳನ್ನು ಹೊಂದಿದ್ದಲ್ಲಿ ಶಸ್ತ್ರಾಸ್ತ್ರ ತಿದ್ದುಪಡಿ ಕಾಯ್ದೆಯನ್ವಯ ಎರಡಕ್ಕಿಂತ ಹೆಚ್ಚುವರಿಯಾಗಿ ಹೊಂದಿರುವ ಮೂರನೇ ಆಯುಧವನ್ನು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 13 ರೊಳಗಾಗಿ ಜಮೆ ಮಾಡುವಂತೆ ಜಿಲ್ಲಾಧಿಕಾರಿ ಎಂ.ಜಿ.ಹೀರೆಮಠ ಅವರು ಆದೇಶಿಸಿದ್ದಾರೆ.