‘ಓ’ ರಕ್ತದ ಗುಂಪಿನವರಿಗೆ ಕೊರೊನಾ ಆತಂಕ ಕಡಿಮೆ- ಅಧ್ಯಯನ

ಬ್ರಿಟನ್: ಕೊರೊನಾ ವೈರಸ್ ಒಬ್ಬನ ಮೇಲೆ ಬೀರುವ ಪ್ರಭಾವ ವಯಸ್ಸು, ಲಿಂಗ ಹಾಗೂ ಆತನಿಗಿರುವ ಇತರ ಕಾಯಿಲೆಗಳನ್ನು ಅವಲಂಭಿಸಿದೆ ಎಂಬ ಸಂಶೋಧನೆ ಈ ಹಿಂದೆ ನಡೆದಿತ್ತು.‌ ವಿಭಿನ್ನ ರಕ್ತದ ಗುಂಪಿನವರ ಮೇಲೆ‌ ವೈರಸ್ ಬೀರುವ ಪರಿಣಾಮವೂ ವಿಭಿನ್ನವಾಗಿದೆ ಎಂಬ ಮಹತ್ವದ ಅಂಶವನ್ನು ವಿಜ್ಞಾನಿಗಳು ಈಗ ಕಂಡು ಹಿಡಿದಿದ್ದಾರೆ.‌

‘ಓ’ ರಕ್ತದ ಗುಂಪಿನವರ ಮೇಲೆ ಕೊರೊನಾ ವೈರಸ್ ಬೀರುವ ಪ್ರಭಾವ ಕಡಿಮೆ.‌ ಎಬಿ ರಕ್ತದ ಗುಂಪಿನವರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ಮಾರ್ಚ್ ನಲ್ಲಿ ಚೀನಾದ ಅಧ್ಯಯನವೊಂದು ಹೇಳಿತ್ತು. ಆ ನಿಟ್ಟಿನಲ್ಲಿ ಈಗ ಮತ್ತಷ್ಟು ಸಂಶೋಧನೆ ನಡೆದಿದ್ದು, ಜರ್ನಲ್‌ ಒಂದರಲ್ಲಿ ವಿಸ್ತಾರ ವರದಿ ಪ್ರಕಟಿಸಲಾಗಿದೆ. ಒಟ್ಟಾರೆ 4.73 ಲಕ್ಷ ಕೊರೊನಾ ಸೋಂಕಿತರ ಡೇಟಾಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಲಾಗಿದೆ. ಅದರಲ್ಲಿ 2.2 ಲಕ್ಷ ಜನ ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ. ‘ಓ’ ರಕ್ತದ ಗುಂಪಿಗೆ ಸೇರಿದವರಿಗೆ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ.

ಕೋವಿಡ್ ಗೆ ಒಳಗಾಗಿದ್ದರೂ ಆಸ್ಪತ್ರೆ ಸೇರಿದವರು ಕಡಿಮೆಯಿದ್ದಾರೆ. ಎ ಹಾಗೂ ಎಬಿ ರಕ್ತದ ಗುಂಪಿಗೆ ಸೇರಿದ ಸೋಂಕಿತರು ಆಸ್ಪತ್ರೆ ಸೇರಿದ ನಂತರ ಉಸಿರಾಟದ ತೊಂದರೆ, ಶ್ವಾಸಕೋಶದ ತೊಂದರೆ, ಹೃದಯ ಹಾಗೂ ಕಿಡ್ನಿ ಸಮಸ್ಯೆಗೆ ಒಳಗಾಗಿದ್ದು ಹೆಚ್ಚಾಗಿದೆ.‌ ಅವರು ಹೆಚ್ಚಿ‌ನ ಪ್ರಮಾಣದಲ್ಲಿ ವೆಂಟಿಲೇಶನ್, ಕೃತಕ ಉಸಿರಾಟದ ವ್ಯವಸ್ಥೆ ಪಡೆದವರಾಗಿದ್ದಾರೆ.‌

ಸ್ಪೇನ್ ನಲ್ಲಿ ಕೋವಿಡ್ ಗೆ ತುತ್ತಾದ 1900 ಜನ ಹಾಗೂ ಸುರಕ್ಷಿತವಾಗಿರುವ 2000 ಜನರ ಡೇಟಾ ಪಡೆದು‌ ಸಮೀಕ್ಷೆ ನಡೆಸಲಾಗಿದೆ. ಅದರಲ್ಲೂ ಇದೇ ಅಭಿಪ್ರಾಯ ಕಂಡು ಬಂದಿದೆ. ‘ಓ’ ಪಾಸಿಟಿವ್ ಹಾಗೂ ನೆಗೆಟಿವ್ ಬ್ಲಡ್ ಗ್ರೂಪ್ ನವರು ಅತಿ ಹೆಚ್ಚು ಸುರಕ್ಷಿತರು ಎಂದು ವರದಿ ಹೇಳುತ್ತದೆ.

Leave a Reply

Your email address will not be published. Required fields are marked *

You cannot copy content of this page