ಇಂದು ಬೆಳಗಾವಿ ಜಿಲ್ಲೆ, ರಾಜ್ಯದಲ್ಲಿ ಮತ್ತೆ ಕೊರೊನಾ ಅಟ್ಟಹಾಸ

ಬೆಳಗಾವಿ: ಜಿಲ್ಲೆಯಲ್ಲಿ ಇಂದು ಕೊರೊನಾ ಮತ್ತೆ ಅಟ್ಟಹಾಸ ಮೆರೆದಿದ್ದು, 279 ಮಂದಿ ಸೋಂಕಿತರು ಪತ್ತೆಯಾಗಿ, ಮೂರು ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ 67 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು 5,503 ಮಂದಿ ಕೊರೊನಾದಿಂದ ಬಾಧಿತರಾಗಿದ್ದು, 92 ಜನರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ತಾಲೂಕುವಾರು ಪತ್ತೆಯಾಗಿರುವ ಸೋಂಕಿತರ ಸಂಖ್ಯೆ ಹೀಗಿದೆ: ಬೆಂಗಳೂರು ನಗರ 2270, ಬಳ್ಳಾರಿ 338, ಬೆಳಗಾವಿ 279, ದಾವಣಗೆರೆ 225, ದಕ್ಷಿಣ ಕನ್ನಡ 208, ಮೈಸೂರು 200, ಧಾರವಾಡ 175, ಉಡುಪಿ 173, ಕಲಬುರಗಿ 168, ಶಿವಮೊಗ್ಗ 131, ತುಮಕೂರು 128, ಯಾದಗಿರಿ 114, ಚಿಕ್ಕಬಳ್ಳಾಪುರ 96, ಹಾಸನ 95, ಬೀದರ್ 91, ವಿಜಯಪುರ 90, ಕೊಪ್ಪಳ 84, ಉತ್ತರ ಕನ್ನಡ 75, ರಾಯಚೂರು 73, ಮಂಡ್ಯ 70, ಗದಗ 61, ಬಾಗಲಕೋಟೆ 57, ರಾಮನಗರ 56, ಚಿತ್ರದುರ್ಗ 52, ಹಾವೇರಿ 50, ಬೆಂಗಳೂರು ಗ್ರಾಮಾಂತರ 49, ಕೋಲಾರ 34, ಚಿಕ್ಕಮಗಳೂರು 33, ಚಾಮರಾಜನಗರ 20 ಮತ್ತು ಕೊಡಗು 8.

Leave a Reply

Your email address will not be published. Required fields are marked *

You cannot copy content of this page