ಜಿಲ್ಲೆಯಲ್ಲಿ ಇಂದೂ ಕೂಡ ದ್ವಿಶತಕ ದಾಟಿದ ಕೊರೊನಾ; ಬೆಳಗಾವಿಯಲ್ಲೇ 99

ಬೆಳಗಾವಿ: ಜಿಲ್ಲೆಯಲ್ಲಿ ಇಂದು 202 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 4 ಮಂದಿ ಸಾವನ್ನಪ್ಪಿದ್ದಾರೆ. ಬೆಳಗಾವಿ ತಾಲೂಕಿನಲ್ಲಿ ಅತಿಹೆಚ್ಚು 99 ಪಾಜಿಟಿವ್ ಪ್ರಕರಣಗಳು ಬಂದಿದ್ದರೆ ಸವದತ್ತಿಯಲ್ಲಿ 5, ಹುಕ್ಕೇರಿ 6, ಬೈಲಹೊಂಗಲ 26, ಅಥಣಿ 17, ಗೋಕಾಕ 30, ರಾಯಬಾಗ 5, ಖಾನಾಪುರ 4 ಮತ್ತು ರಾಮದುರ್ಗದಲ್ಲಿ 7 ಪ್ರಕರಣಗಳು ಪತ್ತೆಯಾಗಿದೆ.

ಬೆಳಗಾವಿ ನಗರದ ಗೋಂಧಳಿ ಗಲ್ಲಿ, ದರ್ಬಾರ ಗಲ್ಲಿ, ಮೀರಾಪುರ ಗಲ್ಲಿ, ಅನಗೋಳದ ಕೊರವಿ ಗಲ್ಲಿ, ಉಜ್ವಲ ನಗರ, ಆಜಾದ ನಗರ, ವಡಗಾವಿ, ಶಹಾಪುರ, ಖಡೇ ಬಜಾರ್, ವಂಟಮುರಿ ಕಾಲನಿ, ಕಪಿಲೇಶ್ವರ ರಸ್ತೆ, ಹಿಂಡಲಗಾದ ಗಣೇಶ ನಗರ, ನ್ಯೂ ಗಾಂಧಿ ನಗರ, ಅಮನ್ ನಗರ, ಶನಿ ಮಂದಿರ, ವೀರಭದ್ರ ನಗರ, ಕಾಕರ ಗಲ್ಲಿ, ಗುರುಪ್ರಸಾದ ಕಾಲನಿ, ಶ್ರೀನಗರ, ಖಾಸಬಾಗ, ಅನಗೋಳ, ರುಕ್ಮಿಣಿ ನಗರ, ಕೊಲ್ಹಾಪುರ ವೃತ್ತ, ಕ್ಯಾಂಪ್, ಮಜಗಾವ, ದೇಗಾಂವ, ಯಳ್ಳೂರ, ಸಾಂಬ್ರಾ, ವಡಗಾವಿಯ ಚಾವಡಿ ಗಲ್ಲಿ ಮತ್ತು ಸಂಭಾಜಿ ನಗರ, ನ್ಯೂ ವೈಭವ ನಗರ, ನಾಜರ್ ಕ್ಯಾಂಪ್, ಕೋತವಾಲ ಗಲ್ಲಿ, ಭೋವಿ ಗಲ್ಲಿ, ಟಿಳಕವಾಡಿಯ ಮಂಗಳವಾರ ಪೇಟೆ, ನಾನಾವಾಡಿ, ಪರಮೇಶ್ವರ ನಗರ, ಶಿವಬಸವ ನಗರ, ವಡಗಾವಿಯ ಕಲ್ಯಾಣ ನಗರ, ನಿಲಜಿ, ಖಾಸಬಾಗ ಪ್ರದೇಶಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.

ಮಚ್ಛೆಯಲ್ಲಿನ ಕೆ.ಎಸ್.ಆರ್.ಪಿ ಯಲ್ಲಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಇದಲ್ಲದೆ, ಜಿಲ್ಲಾಸ್ಪತ್ರೆ, ಕೆಎಲ್ಇ ಆಸ್ಪತ್ರೆಗಳಲ್ಲಿಯೂ ಇಂದು ಸೋಂಕಿತರು ದೃಢಪಟ್ಟಿದ್ದು, ಸಾಂಬ್ರಾದ ವಿಮಾನ ತರಬೇತಿ ಕೇಂದ್ರ (ಎಟಿಎಸ್) ಗೆ ಕೊರೊನಾ ಬಿಡುತ್ತಿಲ್ಲ. ಇಂದು ಹಿರೇಬಾಗೇವಾಡಿ ಠಾಣೆಯ ಪಿಎಸ್ಐಗೆ ಕೊರೊನಾ ತಗುಲಿದ್ದು, ಕಳೆದ ಎರಡ್ಮೂರು ದಿನಗಳಲ್ಲಿ ಠಾಣೆಯ ಒಟ್ಟು 5 ಮಂದಿ ಸಿಬ್ಬಂದಿಗೆ ಸೋಂಕು ತಗುಲಿದೆ.

ಖಾನಾಪುರದ ತಾಲೂಕು ವ್ಯದ್ಯಾಧಿಕಾರಿಗಳ ಕಚೇರಿ, ರಾಮದುರ್ಗದ ಬಸ್ ಡೆಪೊ, ಅಥಣಿಯ ಅಗ್ನಿಶಾಮಕ ದಳ, ಕಾಗವಾಡದ ಆರೋಗ್ಯ ಕೇಂದ್ರ, ಬೈಲಹೊಂಗಲದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇಂದು ಮೃತಪಟ್ಟವರಲ್ಲಿ ಇಬ್ಬರು ಗೋಕಾಕ ತಾಲೂಕಿನವರಾಗಿದ್ದು, ಬೆಳಗಾವಿ ಮತ್ತು ರಾಯಬಾಗ ತಾಲೂಕಿನಿಂದ ತಲಾ ಒಬ್ಬರಾಗಿದ್ದಾರೆ.

ರಾಜ್ಯದಲ್ಲಿ ಇಂದು 6,128 ಮಂದಿ ಕೊರೊನಾ ಬಾಧಿತರಾಗಿದ್ದು, 83 ಮಂದಿ ಮೃತಪಟ್ಟಿದ್ದಾರೆ. ಸಮಾಧಾನದ ಸಂಗತಿ ಎಂದರೆ ರಾಜ್ಯದಲ್ಲಿ ಇಂದು 3,793 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ, ಬೆಳಗಾವಿ ಜಿಲ್ಲೆಯಲ್ಲಿಯೂ 50 ಮಂದಿ ಬಿಡುಗಡೆ ಹೊಂದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page