ಬೆಳಗಾವಿಯಲ್ಲಿಂದು ತ್ರಿಶತಕದತ್ತ ದಾಪುಗಾಲು ಹಾಕಿದ ಕೊರೊನಾ; 4 ಸಾವು

ಬೆಳಗಾವಿ: ಜಿಲ್ಲೆಯಲ್ಲಿ ಇಂದು 293 ಕೊರೊನಾ ಪಾಜಿಟಿವ್ ಪ್ರಕರಣಗಳು ಬಂದಿದ್ದು, ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ಇಂದು ಜಿಲ್ಲೆಯಲ್ಲಿ 52 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಮೃತಪಟ್ಟ ನಾಲ್ಕೂ ಮಂದಿ ಬೆಳಗಾವಿ ತಾಲೂಕಿನವರಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 90 ಕ್ಕೆ ಏರಿಕೆಯಾಗಿದೆ.

ಬೆಳಗಾವಿ ತಾಲೂಕಿನಲ್ಲಿ 182, ಗೋಕಾಕ 24, ಸವದತ್ತಿ 10, ಚಿಕ್ಕೋಡಿ 20, ರಾಮದುರ್ಗ 6, ಅಥಣಿ 13, ಬೈಲಹೊಂಗಲ 24, ಹುಕ್ಕೇರಿ 3, ರಾಯಬಾಗ 3 ಮತ್ತು ಖಾನಾಪುರದಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ.

ಬೆಳಗಾವಿ ನಗರದ ಸದಾಶಿವ ನಗರ, ವಿರಾಟ ಗಲ್ಲಿ, ಕಸಾಯಿ ಗಲ್ಲಿ, ಅನಗೋಳ ರೋಡ್ ಟಿಳಕವಾಡಿ, ಕೆಎಲ್ಇ ಆಸ್ಪತ್ರೆಯ ಸಿಬ್ಬಂದಿ, ನ್ಯೂ ವೀರಭದ್ರ ನಗರ, ಶಿವಬಸವ ನಗರ, ಆನಂದವಾಡಿ ಶಹಾಪುರ,ಶಿವಾಜಿ ನಗರ, ಬಿಮ್ಸ್, ಉದ್ಯಮಬಾಗ, ಚನ್ನಮ್ಮ ನಗರ, ಮಲಪ್ರಭಾ ನಗರ ವಡಗಾವಿ, ಮಜಗಾವಿ, ಖಡೇ ಬಜಾರ್, ಮಹಾದ್ವಾರ್ ರೋಡ್, ಪೈಪಲೈನ್ ರೋಡ್ ವಿಜಯಪುರ, ತೆಗ್ಗಿನ ಗಲ್ಲಿ ವಡಗಾವಿ, ಮಹಾತ್ಮಾ ಫುಲೆ ರೋಡ್, ಉಜ್ವಲ ನಗರ, ಅನಗೋಳ, ಶಾಹು ನಗರ, ಕ್ವೀನ್ಸ್ ಗಾರ್ಡೆನ್, ಸಹ್ಯಾದ್ರಿ ನಗರ, ಚವಾಟ ಗಲ್ಲಿ, ಮಹಾಂತೇಶ ನಗರ, ಮೃತ್ಯುಂಜಯ ನಗರ, ವೀನಸ್ ಆಸ್ಪತ್ರೆ, ಶ್ರೀ ಆರ್ಥೋ ಆಸ್ಪತ್ರೆ, ಕ್ಯಾಂಪ್ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಕಂಡುಬಂದಿವೆ.

ರಾಜ್ಯದಲ್ಲಿಂದು 5,619 ಮಂದಿಗೆ ಕೊರೊನಾ ತಗುಲಿದ್ದು, 100 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯಾದ್ಯಂತ ಇಂದು 5,407 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page