ಮಾತು, ನಡೆ-ನುಡಿ, ಸಮಾಜ ಸೇವೆಯಿಂದ ಜನಮನ ಗೆದ್ದಿದ್ದ ಆನಂದ ಚೋಪ್ರಾ ಇನ್ನಿಲ್ಲ

ಬೆಳಗಾವಿ: ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಸಮಾಜ ಸೇವೆಯಿಂದ ಸಾಕಷ್ಟು ಹೆಸರು ಗಳಿಸಿದ್ದ ಆನಂದ ಚೋಪ್ರಾ(53) ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ನಿನ್ನೆ ರಾತ್ರಿ ಹುಬ್ಬಳ್ಳಿಯಿಂದ ಆಗಮಿಸಿದ್ದ ಚೋಪ್ರಾ ಅವರು ಇಂದು ಮುಂಜಾನೆ ವಾಕಿಂಗ್ ಹೋಗಲು ಎದ್ದಿದ್ದರು. ಆದರೆ ಹೃದಯಾಘಾತದ ಕಾರಣ ಅಲ್ಲಿಯೇ ಕುಸಿದು ಕೊನೆಯುಸಿರೆಳೆದರು. ಚೋಪ್ರಾ ಅವರ ಸಾವಿನಿಂದ ಸವದತ್ತಿ ಕ್ಷೇತ್ರದ ಜನತೆ ಶೋಕದಲ್ಲಿ ಮುಳುಗಿದ್ದು, ಅಲ್ಲಲ್ಲಿ ಚೋಪ್ರಾ ಅವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸುತ್ತಿದ್ದಾರೆ.

ಸವದತ್ತಿ ಕ್ಷೇತ್ರದಿಂದ ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದ ಅವರು ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋತಿದ್ದರು. ಚೋಪ್ರಾ ಅವರು ಈಗಿನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಪಟ್ಟಾ ಶಿಷ್ಯರಾಗಿದ್ದರು. ಕೆಲವೇ ತಿಂಗಳ ಹಿಂದೆ ಅವರ ಮೇಲೆ ಅಪರಿಚಿತರಿಂದ ಹಲ್ಲೆ ಕೂಡ ನಡೆದಿತ್ತು.

Leave a Reply

Your email address will not be published. Required fields are marked *

You cannot copy content of this page