ಪಾಲಿಕೆ ಆಯುಕ್ತರು ಮತ್ತು ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಡಾ.ಡುಮ್ಮಗೋಳ

ಪಾಲಿಕೆ ಆಯುಕ್ತರು ಮತ್ತು ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಡಾ.ಡುಮ್ಮಗೋಳ

 

ಬೆಳಗಾವಿ: ಮಹಾನಗರ ಪಾಲಿಕೆ ಆಯುಕ್ತರಾಗಿರುವ ಜಗದೀಶ್ ಕೆ. ಹಾಗೂ ತಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಾಗಲಿ, ವೈಮನಸ್ಸಾಗಲಿ ಇಲ್ಲ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ಸ್ಪಷ್ಟಪಡಿಸಿದ್ದಾರೆ.

 

ಆಯುಕ್ತ ಜಗದೀಶ್ ಕೆ. ಅವರು ಪಾಲಿಕೆಯಲ್ಲಿ ನಡೆದಿರುವ ಇತ್ತೀಚಿನ ಬೆಳವಣಿಗೆಯಿಂದ ಬೇಸತ್ತು ದೀರ್ಘರಜೆಯ ಮೇಲೆ ತೆರಳಿದ್ದು, ಅದಕ್ಕೆ ತಾವೇ ಹೊಣೆ ಎಂಬಂತೆ ಜನಪ್ರಿಯ ಸ್ಥಳೀಯ ಸುದ್ದಿ ವೆಬ್ಸೈಟ್ ವೊಂದರಲ್ಲಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಟುಡೇ ಬ್ರೇಕಿಂಗ್ಸ್ ಜೊತೆ ಮಾತನಾಡಿ ಪ್ರತಿಕ್ರಿಯಿಸಿರುವ ಅವರು, ಜಗದೀಶ ಅವರು ಯಾವ ಕಾರಣಕ್ಕೆ ರಜೆ ಮೇಲಿದ್ದಾರೆ ತಮಗೆ ಗೊತ್ತಿಲ್ಲ ಎಂದರು.

 

“ನಗರದಲ್ಲಿನ ಕಸದ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಕಸ ವಿಲೇವಾರಿ ಆರೋಗ್ಯ ವಿಭಾಗದ ಅಡಿಯಲ್ಲಿ ಬಂದರೂ, ಅದರ ನಿರ್ವಹಣೆಗೆ ಪಾಲಿಕೆಯಲ್ಲಿ ಪ್ರತ್ಯೇಕ ವಿಭಾಗವಿದೆ. ಮೂರು ಮಂದಿ ಪರಿಸರ ಅಭಿಯಂತರರು ಅದರ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಆರೋಗ್ಯಾಧಿಕಾರಿಯ ಜವಾಬ್ದಾರಿಗಳು ಬೇರೆ ಇರುತ್ತವೆ. ಹೀಗಾಗಿ ಕಸದ ಸಮಸ್ಯೆಗೆ ನನ್ನನ್ನು ಹೊಣೆ ಮಾಡುವುದು ತಪ್ಪು” ಎಂದು ಡಾ.ಡುಮ್ಮಗೋಳ ತಿಳಿಸಿದ್ದಾರೆ.

 

ಇತ್ತೀಚಿಗೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಪಾಲಿಕೆ ಆಯುಕ್ತ ಜಗದೀಶ್ ಕೆ. ಅವರ ಮನೆ ಎದುರು ಕಸ ಸುರಿದು ಪ್ರತಿಭಟನೆ ನಡೆಸಿದ್ದರು. ಆ ಬೆಳವಣಿಗೆ ನಂತರ ಆಯುಕ್ತರು ರಜೆಯ ಮೇಲೆ ತೆರಳಿದ್ದಾರೆ.