‘ರಾಮಾಯಣ’ದ ಅಧಿಕೃತ ಗ್ರಂಥಗಳೆಷ್ಟು ಗೊತ್ತೆ? ಬೆಳಗಾವಿಯ ಮಾಹಿತಿ ಹಕ್ಕು ಕಾರ್ಯಕರ್ತನಿಗೆ ಬೆಚ್ಚಿ ಬೀಳುವ ಮಾಹಿತಿ ನೀಡಿದ ಕೇಂದ್ರ ಸರ್ಕಾರ

‘ರಾಮಾಯಣ’ದ ಅಧಿಕೃತ ಗ್ರಂಥಗಳೆಷ್ಟು ಗೊತ್ತೆ? ಬೆಳಗಾವಿಯ ಮಾಹಿತಿ ಹಕ್ಕು ಕಾರ್ಯಕರ್ತನಿಗೆ ಬೆಚ್ಚಿ ಬೀಳುವ ಮಾಹಿತಿ ನೀಡಿದ ಕೇಂದ್ರ ಸರ್ಕಾರ

 

 

 

ಬೆಳಗಾವಿ: ರಾಮಾಯಣ ಮಹಾಗ್ರಂಥ ಎಂದ ತಕ್ಷಣ ಎಲ್ಲರ ನೆನಪಿಗೆ ಬರುವುದು ವಾಲ್ಮೀಕಿ. ರಾಮಾಯಣವನ್ನು ವಾಲ್ಮೀಕಿ ರಾಮಾಯಣ ಅಂತಲೇ ಕರೆಯುವ ವಾಡಿಕೆಯೂ ಇದೆ. ಆದರೆ ಕೇಂದ್ರ ಸರ್ಕಾರ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ಒಟ್ಟು 154 ರಾಮಾಯಣ ಮಹಾಗ್ರಂಥಗಳನ್ನು ಇದುವರೆಗೆ ಅಧಿಕೃತ ಎಂದು ಪರಿಗಣಿಸಲಾಗಿದೆ. ವಿಶೇಷವೆಂದರೆ, ಕೆಲವು ರಾಮಾಯಣಗಳು ಪಾಕಿಸ್ತಾನ ಸೇರಿದಂತೆ ಇತರೆ ಹೊರದೇಶದಲ್ಲಿಯೂ ಪ್ರಕಟಗೊಂಡಿವೆ.

 

 

ಎಷ್ಟು ರಾಮಾಯಣಗಳನ್ನು ಇದುವರೆಗೆ ಅಧಿಕೃತ ಎಂದು ಪರಿಗಣಿಸಲಾಗಿದೆ ಎಂದು ಬೆಳಗಾವಿಯ ಮಾಹಿತಿ ಹಕ್ಕು ಕಾರ್ಯಕರ್ತ ನ್ಯಾಯವಾದಿ ಸುರೇಂದ್ರ ಉಗಾರೆ ಅವರು ಕೇಂದ್ರ ಸಂಸ್ಕೃತಿ ಇಲಾಖೆಯಿಂದ ಮಾಹಿತಿ ಕೇಳಿದ್ದರು. ಇಲಾಖೆಯು ಅಧಿಕೃತವಾಗಿ ಪರಿಗಣಿಸಿರುವ ಎಲ್ಲ ರಾಮಾಯಣ ಗ್ರಂಥಗಳ ಪಟ್ಟಿಯನ್ನು ಕಳುಹಿಸಿದ್ದು, ಅದರಲ್ಲಿ ಒಂದು ಗ್ರಂಥ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ 2010 ರಲ್ಲಿ ಪ್ರಕಟಿಸಿದ ‘ಶ್ರೀ ರಾಮಾಯಣ ಮಹಾನ್ವೇಷಣೆ’ ಹಾಗೂ 2004 ರಲ್ಲಿ ರಾಷ್ಟ್ರಕವಿ ಕುವೆಂಪು ಅವರು ಬರೆದು ಪ್ರಕಟಿಸಿದ ‘ರಾಮಾಯಣ ದರ್ಶನಂ’ ಕೂಡ ಸೇರಿದೆ. ಇದೇ ಕೃತಿಗೆ ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿರುವುದು ವಿಶೇಷ.

 

 

ಕೇಂದ್ರ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನ, ಚೀನಾ, ಇಂಗ್ಲೆಂಡ್, ಅಮೇರಿಕಾ, ಶ್ರೀಲಂಕಾ, ಮಾರಿಶಿಸ್, ಬರ್ಮಾ, ಮ್ಯಾನ್ಮಾರ್ ಸೇರಿದಂತೆ ಹಲವು ದೇಶಗಳಲ್ಲಿ ರಾಮಾಯಣ ಗ್ರಂಥಗಳು ಪ್ರಕಟಗೊಂಡಿವೆ. ಕೆಲವು ಕೃತಿಗಳನ್ನು ಆಯಾ ದೇಶಗಳ ಭಾಷೆಗಳಿಗೆ ಅನುವಾದ ಮಾಡಲಾಗಿದೆ. ವಾಲ್ಮೀಕಿ ರಾಮಾಯಣ ಮತ್ತು ತುಳಸಿದಾಸ ರಾಮಾಯಣಗಳು ಹೆಚ್ಚು ಅಧಿಕೃತ ಪಟ್ಟಿಯಲ್ಲಿವೆ. 154 ರಾಮಾಯಣಗಳಲ್ಲಿ ಪ್ರತಿಯೊಂದು ಕೂಡ ಒಂದಕ್ಕಿಂತ ಇನ್ನೊಂದು ಭಿನ್ನ ದೃಷ್ಟಿಕೋನದಿಂದ ರಚಿತಗೊಂಡಿದೆ.

 

 

ವಿಶೇಷವೆಂದರೆ ನ್ಯಾಯವಾದಿ ಉಗಾರೆ ಅವರು ಕೇಳಿದ ಮಾಹಿತಿ ನೀಡಲು ಕೇಂದ್ರ ಸರ್ಕಾರ ಸಾಕಷ್ಟು ಕಷ್ಟಪಟ್ಟಿದ್ದು, ದೇಶದ ವಿವಿಧ ರಾಜ್ಯಗಳಲ್ಲಿನ ಏಳು ದೊಡ್ಡ ಲೈಬ್ರರಿಗಳಿಂದ ಮಾಹಿತಿ ತರಿಸಿಕೊಂಡು ನೀಡಿದೆ.