ಬೆಳಗಾವಿ ಬಳಿಯ ಹಂದಿಗನೂರಿನ 10 ವರ್ಷದ ಬಾಲಕನಲ್ಲಿ ಕೊರೊನಾ ಪತ್ತೆ

ಬೆಳಗಾವಿ: ಮುಂಬೈನಿಂದ ಆಗಮಿಸಿದ್ದ ಬೆಳಗಾವಿ ತಾಲೂಕಿನ 10 ವರ್ಷದ ಬಾಲಕನಲ್ಲಿ ಇಂದು ಕೊರೊನಾ ಪತ್ತೆಯಾಗಿದೆ. ಮೇ 13 ರಂದು ಬಾಲಕನು ಪಾಲಕರೊಂದಿಗೆ ಸ್ವಗ್ರಾಮ ಹಂದಿಗನೂರಿಗೆ ಬಂದಿದ್ದನು. ಅವರನ್ನು ಗ್ರಾಮದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಬಾಲಕನಲ್ಲಿ ಮಾತ್ರ ಸೋಂಕು ಪತ್ತೆಯಾಗಿದ್ದು, ತಾಯಿ- ತಂದೆಯ ಗಂಟಲು ದ್ರವದ ಮಾದರಿಗಳು ನೆಗೆಟಿವ್ ಬಂದಿವೆ. ಹಂದಿಗನೂರಿನಲ್ಲಿ ....

Continue reading

ಪೊಲೀಸ್ ಲಾಠಿಗೆ ಹೆದರಿ ಹೃದಯಾಘಾತದಿಂದ ಸಾವಿಗೀಡಾದನಾ ಕಾಗವಾಡದ ಯುವಕ ?

ಬೆಳಗಾವಿ: ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದ ಯುವಕನೋರ್ವ ನಿನ್ನೆ ರಾತ್ರಿ ಪೊಲೀಸ್ ಪೇದೆಯು ನಡೆಸಿದ ಲಾಠಿ ಚಾರ್ಜ್ ಬಳಿಕ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಈ ಕುರಿತಂತೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಕೌಲಗುಡ್ಡ ಗ್ರಾಮದ ಜಗದೀಶ ತಗ್ಗಿನವರ (27) ಸಾವಿಗೀಡಾಗಿರುವ ಯುವಕ. ಯುವಕನು ಗ್ರಾಮದಲ್ಲಿ ಚಿಕ್ಕ ಅಂಗಡಿಯೊಂದನ್ನು ನಡೆಸುತ್ತಿದ್ದ. ನಿನ್ನೆ ಸಂಜೆಯಿಂದಲೇ ....

Continue reading

ಕಾಗವಾಡ ತಹಶೀಲದಾರ ಕಾರಿಗೆ ಪೊಲೀಸ್ ಪೇದೆ ಢಿಕ್ಕಿ ಹೊಡೆದು ಗಂಭೀರ ಗಾಯ

ಬೆಳಗಾವಿ: ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ ಸ್ಟೆಬಲ್ ಒಬ್ಬರು ಕಾಗವಾಡ ತಹಶೀಲದಾರ ಕಾರಿಗೆ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಬಳಿ ಇಂದು ನಡೆದಿದೆ. ಕಾಗವಾಡ ತಹಶಿಲ್ದಾರ ಪ್ರಮೀಳಾ ದೇಶಪಾಂಡೆ ಅವರು ಕರ್ತವ್ಯಕ್ಕೆ ಹಾಜರಾಗಲು ತಮ್ಮ ಖಾಸಗಿ ವಾಹನದಲ್ಲಿ ಚಿಕ್ಕೋಡಿಯಿಂದ ಕಾಗವಾಡಕ್ಕೆ ಹೋಗುವಾಗ ಈ ....

Continue reading

ಗೋಕಾಕ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದ ಮಹಿಳೆ ಬೆಲ್ಲದ ಬಾಗೇವಾಡಿಯಲ್ಲಿ ಸಿಕ್ಕಳು

ಬೆಳಗಾವಿ: ನಿನ್ನೆ ಸಂಜೆ ಗೋಕಾಕ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದ 30 ವರ್ಷದ ಮಹಿಳೆ ತಡರಾತ್ರಿ ಬೆಲ್ಲದ ಬಾಗೇವಾಡಿಯಲ್ಲಿ ಸಿಕ್ಕಿರುವ ಸುದ್ದಿ ಗೊತ್ತಾಗಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತಿದ್ದ ಮಹಿಳೆ ಮತ್ತು ಆಕೆಯ ಗಂಡನನ್ನು ವಶಕ್ಕೆ ಪಡೆದಿರುವ ಪೊಲೀಸರು, ಇಬ್ಬರನ್ನೂ ಕ್ವಾರಂಟೈನ್ ಮಾಡಿದ್ದಾರೆ. ನಾಲ್ಕು ದಿನಗಳ ಹಿಂದೆ ....

Continue reading

ಬೆಳಗಾವಿ ಜಿಲ್ಲೆಯಲ್ಲಿ ಕಳಪೆ ರಸಗೊಬ್ಬರ ಮುಟ್ಟುಗೋಲು; 112 ಮಳಿಗೆಗಳಿಗೆ ನೋಟಿಸ್

ಬೆಳಗಾವಿ: 2020 ಮಂಗಾರು ಹಂಗಾಮು ಪ್ರಾರಂಭವಾಗುತ್ತಿದ್ದು, ರೈತಾಪಿ ವರ್ಗಕ್ಕೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ,ರಸಗೊಬ್ಬರ ಹಾಗೂ ಪೀಡೆನಾಶಕಗಳು ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದಕೃಷಿ ಇಲಾಖೆ ಹಾಗೂ ಜಾಗೃತ ಕೋಶದ ಒಟ್ಟು 65 ಅಧಿಕಾರಿಗಳನ್ನೊಳಗೊಂಡ 19 ತಂಡಗಳು ಜಿಲ್ಲೆಯ ಎಲ್ಲಾತಾಲುಕುಗಳಲ್ಲಿ ಕೃಷಿ ಪರಿಕರ ಮಾರಾಟಮಳಿಗೆಗಳ ತಪಾಸಣೆ ಕೈಗೊಂಡು ....

Continue reading

ರಾಮದುರ್ಗದ ಗರ್ಭಿಣಿ ಮಹಿಳೆಯಲ್ಲಿ ಕೊರೊನಾ ಸೋಂಕು ಪತ್ತೆ

ಬೆಳಗಾವಿ: ಇಂದು ರಾಜ್ಯದಲ್ಲಿ ಕೊರೊನಾ ಮಹಾಸ್ಫೋಟಗೊಂಡಿದ್ದು, ಒಂದೇ ದಿನದಲ್ಲಿ 196 ಪ್ರಕರಣಗಳು ಬೆಳಕಿಗೆ ಬಂದಿವೆ.  ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ವಾಪಸಾಗಿರುವ ಮತ್ತು ಸದ್ಯಕ್ಕೆ ಕ್ವಾರಂಟೈನ್ ನಲ್ಲಿ ಇರುವ ರಾಮದುರ್ಗ ತಾಲೂಕು ಶಿವಪೇಟೆ ಗ್ರಾಮದ 27 ವರ್ಷದ ಓರ್ವ ಮಹಿಳೆಯಲ್ಲಿ ಕೊರೊನಾ ಪತ್ತೆಯಾಗಿದೆ. ಗರ್ಭಿಣಿ ಮಹಿಳೆಯು ಮೇ 11 ರಂದು ....

Continue reading

ಬಿಜೆಪಿ ವತಿಯಿಂದ ಬೆಳಗಾವಿ (ಗ್ರಾಮೀಣ) ವಿಧಾನಸಭಾ ಕ್ಷೇತ್ರದಲ್ಲಿ ರೋಗಪ್ರತಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳ ಉಚಿತ ವಿತರಣೆ ಆರಂಭ

ಬೆಳಗಾವಿ: ಜಿಲ್ಲಾ (ಗ್ರಾಮೀಣ) ಬಿಜೆಪಿ ಮತ್ತು ಪಕ್ಷದ ವೈದ್ಯಕೀಯ ಘಟಕದ ವತಿಯಿಂದ ಖಾನಾಪೂರ ಮತ್ತು ಬೆಳಗಾವಿ (ಗ್ರಾಮೀಣ) ವಿಧಾನಸಭಾ ಕ್ಷೇತ್ರಗಳಲ್ಲಿನ ಸುಮಾರು 1 ಲಕ್ಷ ಕುಟುಂಬಗಳಿಗೆ ಕೊರೊನಾ ವಿರುದ್ಧ ಹೋರಾಡಲು ಬೇಕಾದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾತ್ರೆಗಳನ್ನು ವಿತರಿಸುವ ಕಾರ್ಯಕ್ರಮ ಆರಂಭಗೊಂಡಿದೆ. ಬೆಳಗಾವಿ ಜಿಲ್ಲಾ (ಗ್ರಾಮೀಣ) ಅಧ್ಯಕ್ಷ ಸಂಜಯ ....

Continue reading

ಜಾರ್ಖಂಡದಿಂದ ಬೆಳಗಾವಿಗೆ ಆಗಮಿಸಿದ ಇನ್ನೋರ್ವ ವ್ಯಕ್ತಿಯಲ್ಲಿ ಸೋಂಕು ಪತ್ತೆ

ಬೆಳಗಾವಿ: ಜಾರ್ಖಂಡದ ರಾಜ್ಯದ ಶಿಖರ್ಜಿಗೆ ಹೋಗಿ ಬಂದ ಇನ್ನೊಬ್ಬ ೭೫ ವರ್ಷದ ವ್ಯಕ್ತಿಯಲ್ಲಿ ಇಂದು ಕೊರೊನಾ ಸೋಂಕು ಪತ್ತೆಯಾಗಿದೆ. ನಿನ್ನೆ ಜಾರ್ಖಂಡದಿಂದ ಮರಳಿದ ಕಾಗವಾಡದ ಮೂವರಲ್ಲಿ ಸೋಂಕು ಪತ್ತೆಯಾಗಿತ್ತು. ಇಂದು ಆ ಸಂಖ್ಯೆ ೪ಕ್ಕೆಏರಿದೆ. ಈ ಮೂಲಕ ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ ೧೨೦ಕ್ಕೆ ಏರಿದಂತಾಗಿದೆ. ಇಂದು ಒಂದೇ ....

Continue reading

ಅಥಣಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿದ್ದ 60 ಕ್ವಿಂಟಲ್ ರೇಶನ್ ಅಕ್ಕಿ ವಶಕ್ಕೆ

ಬೆಳಗಾವಿ: ರೇಶನ್ ಅಕ್ಕಿಯನ್ನು ಕಳ್ಳಸಂತೆಯಲ್ಲಿ ಖರೀದಿಸಿ ದಾಸ್ತಾನು ಮಾಡಿ ಇಡಲಾಗಿದ್ದ ಗೋಡೌನ್ ಒಂದರ ಮೇಲೆ ದಾಳಿ ನಡೆಸಿರುವ ಅಥಣಿ ಪೊಲೀಸರು ಸುಮಾರು 60 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಅಥಣಿ ತಾಲೂಕಿನ ಅನಂತಪೂರ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಸಿಪಿಐ ಶಂಕರಗೌಡ ಬಸವನಗೌಡರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.  ಪಡಿತರ ಅಕ್ಕಿಯನ್ನು ....

Continue reading

ಹುಕ್ಕೇರಿಯ ಗರ್ಭಿಣಿ ಮಹಿಳೆಯಲ್ಲಿ ಕೊರೊನಾ?

ಬೆಳಗಾವಿ:  ಹುಕ್ಕೇರಿ ತಾಲೂಕಿನ ಎರಡು ಗ್ರಾಮಗಳಲ್ಲಿ ಕ್ವಾರಂಟೈನ್ ಮಾಡಲಾಗಿರುವ, ಮುಂಬೈನಿಂದ ಆಗಮಿಸಿರುವ ಜನರ ಪೈಕಿ ಇಬ್ಬರಲ್ಲಿ ಕೊರೊನಾ ಸೋಂಕು ತಗುಲಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಆ ಎರಡೂ ಗ್ರಾಮಗಳಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸೋಂಕು ಪತ್ತೆಯಾಗಿರುವ ಇಬ್ಬರಲ್ಲಿ ಒಬ್ಬರು ಗರ್ಭಿಣಿ ಮಹಿಳೆ ಆಗಿದ್ದಾರೆ ಎನ್ನುವ ಸುದ್ದಿ ಇದ್ದು, ಇಬ್ಬರನ್ನೂ ....

Continue reading
You cannot copy content of this page