ಮಣಿಪಾಲ ಆಸ್ಪತ್ರೆಯ ಒಂದೇ ವಾರ್ಡಿನಲ್ಲಿ ಯಡಿಯೂರಪ್ಪ, ಸಿದ್ಧರಾಮಯ್ಯ

ಬೆಂಗಳೂರು: ಕಳೆದ 24 ಗಂಟೆಯಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆ ರಾಜ್ಯದ ಗಮನ ಸೆಳೆದಿದೆ. ರಾಜ್ಯದ ಇಬ್ಬರು ಪ್ರಭಾವಿ ನಾಯಕರಾದ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರಿಗೆ ಕೊರೊನಾ ತಗುಲಿ ಇಬ್ಬರೂ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ವಿಶೇಷವೆಂದರೆ, ಇಬ್ಬರೂ ನಾಯಕರು ಆಸ್ಪತ್ರೆಯ ಒಂದೇ ಮಹಡಿಯಲ್ಲಿ ದಾಖಲಾಗಿದ್ದಾರೆ. ಅಷ್ಟೇ ಅಲ್ಲ, ಇಬ್ಬರ ಕೊಠಡಿಗಳೂ ಒಂದೇ ಸಾಲಿನಲ್ಲಿದ್ದು, ಕಣ್ಣಳತೆ ದೂರದಲ್ಲಿವೆ. ಮಣಿಪಾಲ ಆಸ್ಪತ್ರೆಯಲ್ಲಿ  ಕಟ್ಟಿಸಿದ ಹೊಸ ಐಸೋಲೇಷನ್ ವಾರ್ಡ್ ಈ ಇಬ್ಬರು ನಾಯಕರ ಎಂಟ್ರಿ ಮೂಲಕವೇ ಉದ್ಘಾಟನೆಯಾಗಿದೆ.

ಎರಡೂ ಪ್ರಮುಖ ರಾಜಕೀಯ ಪಕ್ಷಗಳ ಇಬ್ಬರು ಪ್ರಮುಖ ನಾಯಕರು ಒಂದೇ ಆಸ್ಪತ್ರೆಯ ಒಂದೇ ವಾರ್ಡಿನಲ್ಲಿ ದಾಖಲಾಗಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

You cannot copy content of this page