
ಬೆಳಗಾವಿಯ ಬಿಜೆಪಿ ಯುವ ಮುಖಂಡ ರಾಜು ಚಿಕ್ಕನಗೌಡರ ಇನ್ನಿಲ್ಲ
ಬೆಳಗಾವಿ: ಬಿಜೆಪಿ ಬೆಳಗಾವಿ ಜಿಲ್ಲೆಯ ಯುವ ಮುಖಂಡ ಹಾಗೂ ಜಿಲ್ಲಾ (ಗ್ರಾಮಾಂತರ) ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ ಅವರು ನಿಧನ ಹೊಂದಿದ್ದಾರೆ.
ನಿನ್ನೆ ರಾತ್ರಿಯೇ ಅವರು ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಸುದ್ದಿ ಇಂದು ತಡವಾಗಿ ಬೆಳಕಿಗೆ ಬಂದಿದೆ. ರಾಜು ಚಿಕ್ಕನಗೌಡರ ಅವರ ನಿಧನವಾರ್ತೆಯಿಂದ ಬಿಜೆಪಿ ಕಾರ್ಯಕರ್ತರು ಆಘಾತಕ್ಕೊಳಗಾಗಿದ್ದಾರೆ.
ಮೊದಲಿನಿಂದಲೂ ಬಿಜೆಪಿಯಲ್ಲಿ ತಳಮಟ್ಟದ ಕಾರ್ಯಕರ್ತರಾಗಿ ಕೆಲಸ ಮಾಡುತ್ತ ಪಕ್ಷದಲ್ಲಿ ತಮ್ಮ ಸ್ಥಾನವನ್ನು ರಾಜು ಅವರು ಗಟ್ಟಿಗೊಳಿಸಿಕೊಂಡಿದ್ದರು. ಅವರ ಕಾರ್ಯನಿಷ್ಠೆಗೆ ಪಕ್ಷದ ಹಲವಾರು ಹುದ್ದೆಗಳು ಅವರ ಪಾಲಿಗೆ ಬಂದಿದ್ದವು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಎರಡು ಅವಧಿಗೆ ರಾಜು ಚಿಕ್ಕನಗೌಡರ ಅವರು ಕಾರ್ಯನಿರ್ವಹಿಸಿದ್ದರು.