ಪಾಲಿಕೆ ಚುನಾವಣೆ: ಬಿಜೆಪಿಗೆ ಬಹುಮತ; ಎಂಇಎಸ್ ಸರ್ವನಾಶ

ಪಾಲಿಕೆ ಚುನಾವಣೆ: ಬಿಜೆಪಿಗೆ ಬಹುಮತ; ಎಂಇಎಸ್ ಸರ್ವನಾಶ

 

 

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯ ಮತಎಣಿಕೆ ಇಲ್ಲಿಯ ಬಿ ಕೆ ಮಾಡೆಲ್ ಸ್ಕೂಲ್ ನಲ್ಲಿ ಮುಂದುವರಿದಿದ್ದು, ಇದುವರೆಗಿನ ಫಲಿತಾಂಶದ ಪ್ರಕಾರ ಬಿಜೆಪಿ ಸರಳ ಬುಮತ ಸಾಧಿಸಿದ್ದು, 30 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಬಹುಮತ ಗಳಿಸಿದೆ. ಇನ್ನೊಂದೆಡೆ ನಿರೀಕ್ಷೆಯಂತೆ ಎಂಇಎಸ್ ಮುಖಭಂಗ ಅನುಭವಿಸಿದ್ದು, ಈ ಮೂಲಕ ಬೆಳಗಾವಿಯಲ್ಲಿ ಭಾಷಾ ರಾಜಕೀಯಕ್ಕೆ ತೆರೆ ಬಿದ್ದಂತಾಗಿದೆ.

 

 

ಕಾಂಗ್ರೆಸ್ ಪಕ್ಷ ಎರಡಂಕಿ ದಾಟಲು ಕಷ್ಟಪಡುತ್ತಿದ್ದು, ಕಾಂಗ್ರೆಸ್ಸಿನ ಬಂಡಾಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಬಂದಿರುವುದು ವಿಶೇಷವಾಗಿದೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಕೂಡ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ಖಾತೆ ತೆರೆದಿದೆ.

 

 

ಬಿಜೆಪಿ: ನೇತ್ರಾವತಿ ಭಾಗವತ (ವಾರ್ಡ್ 15), ಪ್ರೀತಿ ಕಾಮಕಾರ (ವಾರ್ಡ್ 21), ರಾಜು ಭಾತಕಾಂಡೆ (ವಾರ್ಡ್ 16), ರವಿ ಸಾಂಬ್ರೆಕರ (ವಾರ್ಡ್ 22), ನಿತಿನ ಜಾಧವ (ವಾರ್ಡ್ 29), ಮಂಗೇಶ ಪವಾರ (41), ಮಾಧವಿ ರಾಘೋಚ (ವಾರ್ಡ್ 54), ಜಯತೀರ್ಥ ಸವದತ್ತಿ (ವಾರ್ಡ್ 4), ರೂಪಾ ಚಿಕ್ಕಲದಿನ್ನಿ (45), ಜ್ಯೋತಿಬಾ ನಾಯಿಕ (ವಾರ್ಡ್ 8), ಶೋಭಾ ಪಾಟೀಲ (47), ಅಭಿಜಿತ ಜವಳಕರ (42), ರೇಖಾ ಹೂಗಾರ (26), ರಾಜಶೇಖರ ಡೋಣಿ (36), ಮೀನಾ ವಿಜಾಪುರೆ (ವಾರ್ಡ್ 31), ಸಂತೋಷ ಪೇಡಣೆಕರ (ವಾರ್ಡ್ 6), ಶೋಭಾ ಸೋಮನಾಚೆ (ವಾರ್ಡ್ 57), ದೀಪಾಲಿ ಟೋಪಗಿ (ವಾರ್ಡ್ 49), ರವಿ ಧೋತ್ರೆ (ವಾರ್ಡ್ 28), ಗಿರೀಶ ಧೋಂಗಡಿ (ವಾರ್ಡ್ 24), ಪ್ರಿಯಾ ಸಾತಗೌಡ (ವಾರ್ಡ್ 58), ರೇಷ್ಮಾ ಪಾಟೀಲ (ವಾರ್ಡ್ 33), ಸಂದೀಪ ಜೀರಗ್ಯಾಳ (ವಾರ್ಡ್ 32).

 

 

ಕಾಂಗ್ರೆಸ್: ಜ್ಯೋತಿ ಕಡೋಲಕರ (ವಾರ್ಡ್ 3), ಖುರ್ಷಿದ ಮುಲ್ಲಾ (ವಾರ್ಡ್ 52), ಸಮೀವುಲ್ಲಾ ಮಾಡಿವಾಲೆ (ವಾರ್ಡ್ 11), ಮುಜಮ್ಮಿಲ್ ಡೋಣಿ (ವಾರ್ಡ್ 2), ಶಕೀಲಾ ಮುಲ್ಲಾ (ವಾರ್ಡ್ 20),

 

 

ಪಕ್ಷೇತರ : ಇಕ್ರಾ ಮುಲ್ಲಾ (ವಾರ್ಡ್ 1), ಮೋದಿನಸಾಬ ಮತವಾಲೆ (ವಾರ್ಡ್ 12), ಜರೀನಾ ಫತ್ತೆಖಾನ್ (ವಾರ್ಡ್ 25), ಬಸವರಾಜ ಮೋದಗೇಕರ (ವಾರ್ಡ್ 48), ಅಸ್ಮಿತಾ ಭೈರಗೌಡ ಪಾಟೀಲ (ವಾರ್ಡ್ 47), ಅಜೀಂ ಪಟವೇಗಾರ

 

 

ಐಎಎಂಐಎಂ: ಶಾಹಿದಖಾನ ಪಠಾಣ (ವಾರ್ಡ್ 18),

 

ಎಂಇಎಸ್ : ರವಿ ಸಾಳುಂಖೆ (ವಾರ್ಡ್ 27),