ಸದಲಗಾದ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ

ಬೆಳಗಾವಿ: ಚಿಕ್ಕೋಡಿ ತಾಲೂಕು ಸದಲಗಾ ಪುರಸಭೆಯ ಬಿಲ್ ಕಲೆಕ್ಟರ್ ಅಶೋಕ ನಾಮಾ ಹೆಗಡೆ ರೂ.9,000 ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಭೃಷ್ಟಾಚಾರ ನಿಗೃಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಆಶ್ರಯ ಮನೆಯ ಪಹಣಿ ಪತ್ರಿಕೆಯಲ್ಲಿ ದಾಖಲಾಗಿದ್ದ ಸಾಲದ ಬೋಜಾ ಇಳಿಸಿ ಹೊಸ ಪ್ರಮಾಣ ಪತ್ರ ನೀಡಲು ಬಿಲ್ ಕಲೆಕ್ಟರ್ ಅಶೋಕ ಹೆಗಡೆ ಅರ್ಜಿದಾರ ಶಿವಾನಂದ ಕರಂಗಳೆ ಅವರಿಂದ ಮೊದಲು ರೂ. 15,000 ಬೇಡಿಕೆ ಇಟ್ಟಿದ್ದರು. ಬಳಿಕ ರೂ. 9 ಸಾವಿರಕ್ಕೆ ಕೆಲಸ ಮಾಡಿಕೊಡಲು ಒಪ್ಪಿಕೊಂಡಿದ್ದರು. ಈ ಕುರಿತಂತೆ ಅರ್ಜಿದಾರ ಕರಂಗಳೆ ಎಸಿಬಿಗೆ ದೂರು ಸಲ್ಲಿಸಿದ್ದರು.

ದೂರಿನ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿರುವ ಎಸಿಬಿ ಅಧಿಕಾರಿಗಳ ತಂಡ ಬಿಲ್ ಕಲೆಕ್ಟರ್ ಅಶೋಕ ಹೆಗಡೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಬಳಿಕ ವಶಕ್ಕೆ ಪಡೆಯಲಾಗಿದೆ. ಎಸಿಬಿ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಅವರ ಮಾರ್ಗದರ್ಶನದಲ್ಲಿ ಮತ್ತು ಡಿವೈಎಸ್ಪಿ ಶರಣಪ್ಪ ಅವರ ನೇತೃತ್ವದಲ್ಲಿ ಇನ್ಸಪೆಕ್ಟರ್ ಗಳಾದ ಅಡಿವೇಶ ಗುದಿಗೊಪ್ಪ ಮತ್ತು ಸುನಿಲಕುಮಾರ ಹಾಗೂ ಸಿಬ್ಬಂದಿ ದಾಳಿ ನಡೆಸಿದರು.

Leave a Reply

Your email address will not be published. Required fields are marked *

You cannot copy content of this page