ನಿಮ್ಮ ಓಟರ್ ಐಡಿ ಮಾಹಿತಿ ಖಚಿತಪಡಿಸಿಕೊಳ್ಳಲು ಅಥವಾ ತಿದ್ದುಪಡಿಗೆ ಕಡ್ಡಾಯವಾಗಿ ಎಲ್ಲರೂ ಈ ಆಪ್ ಡೌನಲೋಡ್ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆ

ನಿಮ್ಮ ಓಟರ್ ಐಡಿ ಮಾಹಿತಿ ಖಚಿತಪಡಿಸಿಕೊಳ್ಳಲು ಅಥವಾ ತಿದ್ದುಪಡಿಗೆ ಕಡ್ಡಾಯವಾಗಿ ಎಲ್ಲರೂ ಈ ಆಪ್ ಡೌನಲೋಡ್ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆ

ಬೆಳಗಾವಿ: ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದನ್ವಯ ಸಾರ್ವಜನಿಕರು ಕಡ್ಡಾಯವಾಗಿ ಗೂಗಲ್ ಪ್ಲೇ ಸ್ಟೋರ್ ನಿಂದ ಓಟರ್ಸ್ ಹೆಲ್ಪಲೈನ್ ಆಪ್ (Voters Helpline App ) ಡೌನಲೋಡ್ ಮಾಡಿಕೊಂಡು ತಮ್ಮ ಮಾಹಿತಿಯನ್ನು ಖಚಿತಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದರಿ ಮೊಬೈಲ್ ಆಪ್ ಮೂಲಕ ಸಾರ್ವಜನಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವುದು, ತಿದ್ದುಪಡಿ ಹಾಗೂ ಬೇರೆ ಕಡೆ ವರ್ಗಾಯಿಸುವುದು ಸೇರಿದಂತೆ ಪಟ್ಟಿಯಿಂದ ಹೆಸರನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಕಾರಣ ಕಡ್ಡಾಯವಾಗಿ ಪ್ರತಿಯೊಬ್ಬರೂ ಈ ಆಪ್ ಡೌನಲೋಡ್ ಮಾಡಿಕೊಂಡು ತಮ್ಮ ಮಾಹಿತಿಯನ್ನು ಗಮನಿಸಬೇಕೆಂದು ಕೋರಲಾಗಿದೆ.