ಆನೆ ಮೇಲೆ ಕುಳಿತು ಯೋಗ ಮಾಡಲು ಹೋಗಿ ಉರುಳಿ ಬಿದ್ದ ಬಾಬಾ ರಾಮದೇವ

ನವದೆಹಲಿ: ಪತಂಜಲಿ ಸಂಸ್ಥೆ ಸಂಸ್ಥಾಪಕ ಯೋಗಗುರು ಬಾಬಾ ರಾಮದೇವ ಅವರು ಆನೆಯ ಮೇಲೆ ಕುಳಿತು ಯೋಗ ಮಾಡಲು ಹೋಗಿ ಉರುಳಿ ಬಿದ್ದ ಘಟನೆ ನಡೆದಿದೆ.

ಮಥುರಾದಲ್ಲಿ ಆನೆಯ ಮೇಲೆ ಏರಿ ಕುಳಿತುಕೊಂಡಿದ್ದ ಬಾಬಾ ರಾಮದೇವ ಅವರು ಯೋಗಾಸನ ಮಾಡುತ್ತಿದ್ದರು. ಈ ವೇಳೆ ಆನೆ ತನ್ನ ದೇಹವನ್ನು ಕುಲುಕ್ಕಿದ್ದರಿಂದ ಆಯ ತಪ್ಪಿದ ರಾಮದೇವ ಅವರು ಆನೆಯ ಮೇಲಿನಿಂದ ಕೆಳಕ್ಕೆ ಉರುಳಿ ಬಿದ್ದಿದ್ದಾರೆ. ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದ್ದು, ಬಾಬಾ ರಾಮದೇವ ಶೀಘ್ರ ಗುಣಮುಖರಾಗಲಿ ಎಂದು ಹಲವು ನೆಟ್ಟಿಗರು ಹಾರೈಸಿದ್ದಾರೆ.

ಈ ಹಿಂದೆಯೂ ಖಾಲಿ ರಸ್ತೆಯಲ್ಲಿ ಸೈಕಲ್‌ ತುಳಿಯುತ್ತಿದ್ದಾಗ ರಾಮದೇವ ಅವರ ಸೈಕಲ್‌ ಮಳೆ ಬಂದಿದ್ದರಿಂದ ಸ್ಕಿಡ್‌ ಆಗಿ ಬಿದ್ದಿದ್ದ ವಿಡಿಯೋ ಸಹ ವೈರಲ್‌ ಆಗಿತ್ತು.

Leave a Reply

Your email address will not be published. Required fields are marked *

You cannot copy content of this page