ಜಗತ್ತನ್ನು ಮತ್ತೊಮ್ಮೆ ಆತಂಕಕ್ಕೆ ದೂಡಿದ ಬಿ.1.1.7 ವೈರಾಣು; ಇಂಗ್ಲೆಂಡಿನಿಂದ ಬೆಳಗಾವಿಗೆ ಬಂದಿದ್ದ ಮಹಿಳೆಯ ತಪಾಸಣೆ

ಬೆಳಗಾವಿ: ಇಂಗ್ಲೆಂಡಿನಲ್ಲಿ ಬಿ.1.1.7 ಎಂಬ ಹೆಸರಿನ, ತನ್ನ ಸ್ವರೂಪ ಬದಲಿಸಿಕೊಂಡಿರುವ ಹೊಸ ಕೊರೊನಾ ವೈರಾಣು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಇಂಗ್ಲೆಂಡ್ ನೊಂದಿಗೆ ಸಂಪರ್ಕ ಕಲ್ಪಿಸುವ ಎಲ್ಲ ವಿಮಾನಗಳನ್ನು ರದ್ದುಪಡಿಸಿವೆ. ಕಳೆದ ಒಂದು ತಿಂಗಳಲ್ಲಿ ಇಂಗ್ಲೆಂಡ್ ನಿಂದ ಭಾರತಕ್ಕೆ ಆಗಮಿಸಿರುವ ಎಲ್ಲ ವ್ಯಕ್ತಿಗಳನ್ನು ಹುಡುಕಿ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಡಿಸೆಂಬರ್ 14 ರಂದು ಇಂಗ್ಲೆಂಡಿನಿಂದ ಬೆಳಗಾವಿಗೆ ಆಗಮಿಸಿದ್ದ ೩೫ ವಯಸ್ಸಿನ ಮಹಿಳೆಯ ಗಂಟಲು ಮಾದರಿ ಸಂಗ್ರಹಿಸಿ ತಪಾಸಣೆಗೆ ಕಳಿಸಿ ಕೊಡಲಾಗಿದೆ. ನಾಳೆ ವರೆಗೆ ವರದಿ ಬರುವ ಸಾಧ್ಯತೆ ಇದೆ. ಮಹಿಳೆಗೆ ಐಸೋಲೇಶನ್ (ಪ್ರತ್ಯೇಕ ವಾಸ) ಆಗುವಂತೆ ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ.

ಮೂಲಗಳ ಪ್ರಕಾರ ಮಹಿಳೆಯು ಡಿಸೆಂಬರ್ 14 ರಂದು ಲಂಡನ್ ನಿಂದ ಬೆಳಗಾವಿಗೆ ಆಗಮಿಸಿದ್ದಳು. ಆದರೆ ಡಿಸೆಂಬರ್ 15 ರಿಂದ ನಿನ್ನೆ ಸಂಜೆಯ ವರೆಗೆ ಜಮಖಂಡಿಯಲ್ಲಿದ್ದಳು. ನಿನ್ನೆ ಸಂಜೆ ಬೆಳಗಾವಿಗೆ ಬಂದಿದ್ದಳು. ಆರೋಗ್ಯ ಇಲಾಖೆ ವತಿಯಿಂದ ಮಹಿಳೆಯ ಮೇಲೆ ನಿಗಾ ಇರಿಸಲಾಗಿದೆ.

ಬಿ.1.1.7 ವೈರಾಣು ಕೊರೊನಾ ವೈರಸ್ ನಿಂದಲೇ ವಿಕಾಸವಾಗಿದ್ದರೂ, ಅದರ ರಚನೆ ಮತ್ತು ಕಾರ್ಯವಿಧಾನದಲ್ಲಿ ವ್ಯಾಪಕ ಬದಲಾವಣೆಗಳನ್ನು ಗುರುತಿಸಲಾಗಿದೆ. ಮೂಲ ಕೊರೊನಾ ವೈರಸ್ ಮತ್ತು ಬಿ.1.1.7 ನಡುವೆ ವಿಜ್ಞಾನಿಗಳು ೨೩ ವ್ಯತ್ಯಾಸಗಳನ್ನು ಗುರುತಿಸಿದ್ದು, ಇದು ಕೊರೊನಾಗಿಂದ ಶೇ.70 ರಷ್ಟು ಹೆಚ್ಚು ವೇಗವಾಗಿ ಹರಡುವುದನ್ನು ಪತ್ತೆ ಹಚ್ಚಿದ್ದಾರೆ. ಆದರೆ ಇದು ಎಷ್ಟು ಅಪಾಯಕಾರಿ ಎನ್ನುವುದು ಇನ್ನೂ ಗೊತ್ತಾಗಬೇಕಿದೆ.

Leave a Reply

Your email address will not be published. Required fields are marked *

You cannot copy content of this page