ಅಥಣಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿದ್ದ 60 ಕ್ವಿಂಟಲ್ ರೇಶನ್ ಅಕ್ಕಿ ವಶಕ್ಕೆ

ಬೆಳಗಾವಿ: ರೇಶನ್ ಅಕ್ಕಿಯನ್ನು ಕಳ್ಳಸಂತೆಯಲ್ಲಿ ಖರೀದಿಸಿ ದಾಸ್ತಾನು ಮಾಡಿ ಇಡಲಾಗಿದ್ದ ಗೋಡೌನ್ ಒಂದರ ಮೇಲೆ ದಾಳಿ ನಡೆಸಿರುವ ಅಥಣಿ ಪೊಲೀಸರು ಸುಮಾರು 60 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಅಥಣಿ ತಾಲೂಕಿನ ಅನಂತಪೂರ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಸಿಪಿಐ ಶಂಕರಗೌಡ ಬಸವನಗೌಡರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.  ಪಡಿತರ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ ಸಂಗ್ರಹಿಸಿ ಇಟ್ಟಿದ್ದ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ವ್ಯಾಪಾರಿ ಕುಮಾರ ಪಡಸಲಗಿ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದರು.

ಅಥಣಿ ತಾಲೂಕು ಸುತ್ತಮುತ್ತಲಿನ ಪ್ರದೇಶದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಖರೀದಿಸಿ ಅದನ್ನು ಮಹಾರಾಷ್ಟ್ರಕ್ಕೆ ಮಾರಾಟ ಮಾಡುವ ದೊಡ್ಡ ಜಾಲವಿದ್ದು, ಈ ಹಿಂದೆಯೂ ಹಲವು ಬಾರಿ ಇಂತಹ ದಾಳಿಗಳು ನಡೆದಿವೆ.

Visits: 309

One thought on “ಅಥಣಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿದ್ದ 60 ಕ್ವಿಂಟಲ್ ರೇಶನ್ ಅಕ್ಕಿ ವಶಕ್ಕೆ

  1. He should be punished as per law. He should be put behind bars for one year, it is so lesson to him as well as to others, whoever does illegal practice

Leave a Reply

Your email address will not be published. Required fields are marked *

You cannot copy content of this page