ಕೋವಿಡ್-19 ನಿಂದ ಮರಣ: ಪರಿಹಾರ ಧನಕ್ಕಾಗಿ ಅರ್ಜಿ ಆಹ್ವಾನ 

ಕೋವಿಡ್-19 ನಿಂದ ಮರಣ: ಪರಿಹಾರ ಧನಕ್ಕಾಗಿ ಅರ್ಜಿ ಆಹ್ವಾನ 


 
ಬೆಳಗಾವಿ: ಕೋವಿಡ್ -19 ಸೋಂಕಿನಿಂದಾಗಿ ದುಡಿಯುವ ಸದಸ್ಯರನ್ನು ಕಳೆದುಕೊಂಡ  ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ರೂ.1 ಲಕ್ಷ ಪರಿಹಾರವನ್ನು ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

 ಸಂತ್ರಸ್ತ ಕುಟುಂಬದವರು ಈ ಕುರಿತಂತೆ ಅರ್ಜಿಯನ್ನು ತಾಲೂಕು ಕಛೇರಿಯಲ್ಲಿ ಅಥವಾ ತಮ್ಮ ವ್ಯಾಪ್ತಿಯ ನಾಡ ಕಛೇರಿಗಳಲ್ಲಿ ನಿಗದಿತ ನಮೂನೆ-1 ಪಡೆದುಕೊಂಡು ಸಲ್ಲಿಸಬೇಕಾಗಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ವ್ಯಾಪ್ತಿಯ ನಾಡ ಕಛೇರಿಯಲ್ಲಿ ಸಲ್ಲಿಸಬೇಕು. 


ಸಲ್ಲಿಸಬೇಕಾಗಿರುವ ದಾಖಲೆಗಳು :  

 ಅರ್ಹತೆ ಪಡೆದ ವೈದ್ಯರಿಂದ ದೃಢೀಕರಿಸಲ್ಪಟ್ಟ ಕೋವಿಡ್-19  ಪಾಸಿಟಿವ್ /ನೆಗೆಟಿವ್ ರಿಪೋರ್ಟ್, ಅರ್ಹತೆ ಪಡೆದ ವೈದ್ಯರಿಂದ ದೃಢೀಕರಿಸಲ್ಪಟ್ಟ ರೋಗಿ ಸಂಖ್ಯೆ ಪಿ-ನಂಬರ್ ಮತ್ತು ಅರ್ಹತೆ ಪಡೆದ ವೈದ್ಯರಿಂದ ದೃಢೀಕರಿಸಲ್ಪಟ್ಟ ಕ್ಲಿನಿಕಲ್ ರೇಡಿಯಾಲಜಿ ಮತ್ತು ಪ್ರಯೋಗಾಲಯ ವರದಿಯನ್ನು ಸಲ್ಲಿಸಬೇಕು.  

 ಜೊತೆಗೆ ಮೃತಪಟ್ಟ ವ್ಯಕ್ತಿಯ ಆಧಾರ್ ಕಾರ್ಡ್ ಪ್ರತಿ, ಮರಣ ಪ್ರಮಾಣ ಪತ್ರದ ಪ್ರತಿ, ಅರ್ಜಿದಾರರ ಪಡಿತರ ಚೀಟಿ ಪ್ರತಿ (ಬಿಪಿಎಲ್) ಹಾಗೂ ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಸಲ್ಲಿಸಬೇಕು. 

 ಇದರೊಂದಿಗೆ ಅರ್ಜಿದಾರರ ಸ್ವಯಂ ಘೋಷಣಾ ಪತ್ರ (ನಮೂನೆ 2) ಮತ್ತು ಕುಟುಂಬ ಸದಸ್ಯರ ನಿರಾಕ್ಷೇಪಣಾ ಪತ್ರ (ನಮೂನೆ-3) ಗಳನ್ನು ತಾಲೂಕು ಕಛೇರಿಯಲ್ಲಿ ಅಥವಾ ತಮ್ಮ ವ್ಯಾಪ್ತಿಯ ನಾಡ ಕಛೇರಿಗಳಲ್ಲಿ ಸಲ್ಲಿಸಬೇಕು ಎಂದು ತಹಸೀಲದಾರ್ ಆರ್.ಕೆ.ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.