ಜಾರ್ಖಂಡದಿಂದ ಬೆಳಗಾವಿಗೆ ಆಗಮಿಸಿದ ಇನ್ನೋರ್ವ ವ್ಯಕ್ತಿಯಲ್ಲಿ ಸೋಂಕು ಪತ್ತೆ

ಬೆಳಗಾವಿ: ಜಾರ್ಖಂಡದ ರಾಜ್ಯದ ಶಿಖರ್ಜಿಗೆ ಹೋಗಿ ಬಂದ ಇನ್ನೊಬ್ಬ ೭೫ ವರ್ಷದ ವ್ಯಕ್ತಿಯಲ್ಲಿ ಇಂದು ಕೊರೊನಾ ಸೋಂಕು ಪತ್ತೆಯಾಗಿದೆ. ನಿನ್ನೆ ಜಾರ್ಖಂಡದಿಂದ ಮರಳಿದ ಕಾಗವಾಡದ ಮೂವರಲ್ಲಿ ಸೋಂಕು ಪತ್ತೆಯಾಗಿತ್ತು. ಇಂದು ಆ ಸಂಖ್ಯೆ ೪ಕ್ಕೆಏರಿದೆ. ಈ ಮೂಲಕ ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ ೧೨೦ಕ್ಕೆ ಏರಿದಂತಾಗಿದೆ.

ಇಂದು ಒಂದೇ ದಿನ ರಾಜ್ಯದಲ್ಲಿ ಒಟ್ಟು ೧೦೫ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಬೆಂಗಳೂರಿನ- ೫, ಚಿಕ್ಕಬಳ್ಳಾಪುರ-೫೧, ತುಮಕೂರು-೮, ಹಾವೇರಿ-೩, ಮಂಡ್ಯ-೩, ಹಾಸನ-೧೪, ಧಾರವಾಡ-೨, ವಿಜಯಪುರ-೨, ಬೀದರ-೬, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ತಲಾ ಓರ್ವರು ಬಾಧಿತರಾಗಿದ್ದಾರೆ. ಒಟ್ಟು ಬಾಧಿತರಲ್ಲಿ ೪೧ ಮಂದಿ ಮಹಿಳೆಯರೇ ಇರುವುದು ವಿಶೇಷ.

Visits: 393

Leave a Reply

Your email address will not be published. Required fields are marked *

You cannot copy content of this page