ಪಾಕಿಸ್ತಾನ, ಚೀನಾ, ನೇಪಾಳ ಬಳಿಕ ಭಾರತಕ್ಕೆ ಈಗ ಭೂತಾನ್ ಕ್ಯಾತೆ

ನವದೆಹಲಿ: ಬೇಕಂತಲೇ ತಂಟೆ ಮಾಡುವ ಪ್ರವೃತ್ತಿಯ ನೆರೆಮನೆಯ ರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ, ಚೀನಾದ ಸಾಲಿಗೆ ಈ ಭೂತಾನ್​ ಕೂಡ ಸೇರಿಕೊಂಡಿದೆ.

ಅಸ್ಸಾಂ ರಾಜ್ಯಕ್ಕೆ ಹರಿದು ಬರ್ತಿದ್ದ ನೀರಾವರಿ ನೀರನ್ನು ಭೂತಾನ್ ತಡೆಹಿಡಿದಿದೆ. 1953ರಿಂದ ಭೂತಾನ್​ನಿಂದ ಡೊಂಗ್ ನೀರಾವರಿ ಚಾನೆಲ್​ ಮೂಲಕ ನೀರು ಅಸ್ಸಾಂಗೆ ಹರಿದು ಬರುತ್ತಿತ್ತು. ಇಲ್ಲಿನ ಸುಮಾರು 25ಕ್ಕೂ ಅಧಿಕ ಗ್ರಾಮಗಳ ಸಾವಿರಾರು ರೈತರು ಇದೇ ನೀರಿನಿಂದಲೇ ವ್ಯವಸಾಯ ಮಾಡ್ತಿದ್ದರು. ಇದೇ ನೀರನ್ನು ನಂಬಿ ಭತ್ತ ಬೆಳೆಯುತ್ತಿದ್ದರು. ಆದರೆ ಭೂತಾನ್ ಈಗ ಏಕಾಏಕಿ ಈ ನೀರನ್ನು ತಡೆ ಹಿಡಿದಿದೆ. ಈ ಬಗ್ಗೆ ರೈತರು ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಭೂತಾನ್​ನ ಮೂಲಗಳು, ಇದು ಕೊರೊನಾ ಸೋಂಕು ನಿಯಂತ್ರಣಕ್ಕೆ ತೆಗೆದುಕೊಂಡಿರುವ ನಿರ್ಧಾರದ ಒಂದು ಭಾಗವಾಗಿದೆ ಎಂದು ಹೇಳಿವೆ.

Leave a Reply

Your email address will not be published. Required fields are marked *

You cannot copy content of this page