ಡಿಸೆಂಬರ್‌ನಲ್ಲಿ ‌ಬೆಳಗಾವಿ‌ಯ ಸುವರ್ಣಸೌಧದಲ್ಲಿ‌ ಅಧಿವೇಶನ ನಡೆಯುವುದು ಬಹುತೇಕ ಖಚಿತ

ಡಿಸೆಂಬರ್‌ನಲ್ಲಿ ‌ಬೆಳಗಾವಿ‌ಯ ಸುವರ್ಣಸೌಧದಲ್ಲಿ‌ ಅಧಿವೇಶನ ನಡೆಯುವುದು ಬಹುತೇಕ ಖಚಿತ


ಬೆಂಗಳೂರು: ಬರುವ ಡಿಸೆಂಬರ್‌ನಲ್ಲಿ ‌ಚಳಿಗಾಲದ‌ ವಿಧಾನ ಮಂಡಲ‌ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವುದು ಬಹತೇಕ ಖಚಿತವಾಗಿದೆ.
ಈ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. "ಮುಂದಿನ ಅಧಿವೇಶನ ಡಿಸೆಂಬರ್ ‌ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಸರ್ಕಾರ ಈ ಬಗ್ಗೆ ಸ್ಪಷ್ಟತೆ ನೀಡಲಿದೆ" ಎಂದು ಕಾಗೇರಿ ತಿಳಿಸಿದರು.
ಕಳೆದ ಎರಡೂವರೆ ವರ್ಷದಿಂದ ಸುವರ್ಣ ಸೌಧದಲ್ಲಿ ಅಧಿವೇಶನ ನಡೆದಿಲ್ಲ. ಬಸವರಾಜ ಹೊರಟ್ಟಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಮುಖಂಡರು ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಹೀಗಾಗಿ ಈ ಬಾರಿ ಅಧಿವೇಶನ ನಡೆಯುವುದು ಬಹುತೇಕ ಖಚಿತವಾಗಿದೆ.