ಪಾಲಿಕೆ‌ ಚುನಾವಣೆ: ನೀರಸ ಮತದಾನ, ಅಭ್ಯರ್ಥಿಗಳಲ್ಲಿ‌ ಬದಲಾಗುತ್ತಿರುವ ಫಲಿತಾಂಶದ ಲೆಕ್ಕಾಚಾರ

ಪಾಲಿಕೆ‌ ಚುನಾವಣೆ: ನೀರಸ ಮತದಾನ, ಅಭ್ಯರ್ಥಿಗಳಲ್ಲಿ‌ ಬದಲಾಗುತ್ತಿರುವ ಫಲಿತಾಂಶದ ಲೆಕ್ಕಾಚಾರ


ಬೆಳಗಾವಿ: ಮಹಾನಗರ ಪಾಲಿಕೆ‌ಗೆ ಇಂದು ಚುನಾವಣೆ ನಡೆಯುತ್ತಿದ್ದು, ಮತದಾರರು‌ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಲು ಆಸಕ್ತಿ ತೋರದೇ ಇರುವುದು ಎದ್ದು ಕಾಣುತ್ತಿದೆ. ನೀರಸ ಮತದಾನದ ಕಾರಣ ಬಹುತೇಕ ಮತಗಟ್ಟೆಗಳಲ್ಲಿ ಮತದಾರರ ಸಾಲು ಕಾಣುತ್ತಿಲ್ಲ.
ಮಧ್ಯಾಹ್ನ 3 ಗಂಟೆ ವರೆಗೆ ಕೇವಲ ಶೇ. 33.87 ರಷ್ಟು ಮತದಾನವಾಗಿದ್ದು, ಮತದಾನದ ಸಮಯ ಮುಗಿಯಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ವಾರ್ಡ್ 48 ರಲ್ಲಿ‌ 3 ಗಂಟೆ ವರೆಗೆ ಅತಿಹೆಚ್ಚು ಶೇ. 50.67 ರಷ್ಟು ಮತದಾನವಾಗಿದ್ದು, ಅತಿ ಕಡಿಮೆ ಎಂದರೆ ಶೇ.14.93 ರಷ್ಟು ಮತದಾನ ವಾರ್ಡ್ 26 ರಲ್ಲಿ ಆಗಿದೆ.
ಒಟ್ಟಾರೆ ಮತದಾನ ಕಡಿಮೆ ಆಗಿರುವುದರಿಂದ ಇದು ಸೋಲು- ಗೆಲುವಿನ ಲೆಕ್ಕಾಚಾರದ ಮೇಲೂ ಪರಿಣಾಮ ಬೀರಲಿದೆ. ಬಹುತೇಕ ವಾರ್ಡ್ ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಪೈಪೋಟಿ ಎದ್ದು ಕಾಣುತ್ತಿದೆ. ಎಂಇಎಸ್ ಮುಖಂಡರು ಈ ಬಾರಿ ಪ್ರಚಾರದಲ್ಲಿಯೇ ಇರಲಿಲ್ಲ. ಹೀಗಾಗಿ ಅಲ್ಲಿ ಅಷ್ಟೊಂದು ಉತ್ಸಾಹ ಕಾಣುತ್ತಿಲ್ಲ. 
58 ವಾರ್ಡ್ ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಒಟ್ಟು  385 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ 55 ಮತ್ತು ಕಾಂಗ್ರೆಸ್ 45 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, 285 ಪಕ್ಷೇತರರು ‌ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.